ನಟಿ ಶುಭಾ ಪೂಂಜಾ ಅವರ ತಾಯಿ ವಿಧಿವಶರಾಗಿದ್ದು, ಅಮ್ಮನ ಆಸೆಯಂತೆ ಪ್ರೀತಿಯ ತಾಯಿಗೆ ನಟಿ ಭಾವುಕ ವಿದಾಯ ಹೇಳಿದ್ದಾರೆ.
ಆ ನಟಿಯ ಸೌಂದರ್ಯ ನೋಡಿ ಮೈ ಮರೆತಿದ್ದ ನಟ: ತುಟಿಯಲ್ಲಿ ರಕ್ತ ಬರುವಂತೆ ಕಚ್ಚಿ ಚುಂಬಿಸಿದ್ದ!
ಶುಭಾ ಪೂಂಜಾ ಅವರ ತಾಯಿಗೆ 70 ವರ್ಷ ವಯಸ್ಸಾಗಿತ್ತು. ಕಳೆದ 4 ತಿಂಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ನ್ಯುಮೋನಿಯಾ ಅಟ್ಯಾಕ್ ಆಗಿ ಲಂಗ್ಸ್ನಲ್ಲಿ ನೀರು ತುಂಬಿದ್ದ ಕಾರಣ ಆರೋಗ್ಯದಲ್ಲಿ ಏರುಪೇರಾಗಿತ್ತು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶುಭ ಪೂಂಜಾ ತಾಯಿ ನಿನ್ನೆ ವಿಧಿವಶರಾಗಿದ್ದಾರೆ. ತಾಯಿಯ ಆಸೆಯಂತೆ ಕೊನೆ ಕಾರ್ಯಗಳನ್ನು ಶುಭಾ ಪೂಂಜಾ ಕುಟುಂಬ ಮಂಗಳೂರಲ್ಲಿ ನೆರವೇರಿಸಿದೆ. ತಾಯಿಯ ಪಾರ್ಥಿವ ಶರೀರವನ್ನು ಮಂಗಳೂರಿಗೆ ಕೊಂಡೊಯ್ದ ಕುಟುಂಬಸ್ಥರು ಅಂತಿಮ ನಮನ ಸಲ್ಲಿಸಿದ್ದಾರೆ.
ತನ್ನ ತಾಯಿಯ ಅಗಲಿಕೆಯ ಬಗ್ಗೆ ನಟಿ ಶುಭಾ ಪೂಂಜಾ ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ. ಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ. ನೀನು ಇಲ್ಲದೆ ನನಗೆ ಜೀವನವಿಲ್ಲ. ನಿನ್ನ ಬಿಟ್ಟು ನನಗೆ ಬದುಕಕ್ಕೆ ಬರೋದು ಇಲ್ಲ. 24 ಗಂಟೆ ನಿನ್ನ ಜೊತೇನೆ ನಾನು ಇರುತ್ತಿದ್ದೆ. ಈಗ ನಾನು ಏನು ಮಾಡಲಿ. ಎಲ್ಲಿ ಹೋಗಲಿ. ಯಾರಿಗೋಸ್ಕರ ವಾಪಸ್ ಮನೆಗೆ ಬರಲಿ. ನೀನು ನನ್ನ ಯಾಕೆ ಬಿಟ್ಟು ಹೋದೆ. ನನ್ನ ಇಡೀ ಜೀವನಕ್ಕೆ ಅರ್ಥವಿಲ್ಲದೆ ಆಯ್ತು. ನನ್ನ ಇಡೀ ಜೀವನವೇ ನೀನಾಗಿದ್ದೆ ನನ್ನ ಯಾಕೆ ಬಿಟ್ಟು ಹೋದೆ ಎಂದು ಪೋಸ್ಟ್ ಮಾಡಿದ್ದಾರೆ.