ಬಾಗಲಕೋಟೆ:– ಕರ್ನಾಟಕ ಇತಿಹಾಸದಲ್ಲೇ ಅತೀ ದೊಡ್ಡ ಮೊತ್ತದ ಬಜೆಟ್ ಅಂದರೆ 4,09,549 ಕೋಟಿ ರೂ ದಾಖಲೆ ಗಾತ್ರದ ಬಜೆಟ್ ಮಂಡನೆಯಾಗಿದೆ.
ಎಲ್ಲರ ನಿರೀಕ್ಷೆಯಂತೆ ಈ ಬಾರಿಯೂ 5 ಗ್ಯಾರಂಟಿ ಯೋಜನೆಗಳಿಗಾಗಿ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ 51,300 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ.ಶಾಲೆ-ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿ, ಶೌಚಾಲಯ ನಿರ್ಮಾಣ ಮತ್ತು ದುರಸ್ತಿ ಕಾರ್ಯಗಳಿಗೆ 725 ಕೋಟಿ ರೂ. ಹಾಗೂ ಪೀಠೋಪಕರಣ ಒದಗಿಸಲು 50 ಕೋಟಿ ರೂ. ಬಿಡುಗಡೆ. ಮಧ್ಯಾಹ್ನ ಉಪಹಾರ ಯೋಜನೆಯಡಿ 16,347 ಶಾಲೆಗಳ ಅಡುಗೆಮನೆ ನವೀಕರಣ ಹಾಗೂ ಪಾತ್ರೆ ಪರಿಕರ ಪೂರೈಕೆಗೆ 46 ಕೋಟಿ ರೂ.ಅಕ್ಷರ ಆವಿಷ್ಕಾರ ಯೋಜನೆ ಅಡಿ 200 ಕೋಟಿ ರೂ. ವೆಚ್ಚದಲ್ಲಿ ಕೆ.ಪಿ.ಎಸ್. ಶಾಲೆಗಳನ್ನಾಗಿ ಕಲ್ಯಾಣ ಕರ್ನಾಟಕ ಭಾಗದ 50 ಶಾಲೆಗಳ ಉನ್ನತೀಕರಣಕ್ಕೆ ಒಟ್ಟಾರೆಯಾಗಿ 54000 ಕೊ. ರೂ ಗಳನ್ನು ಅನುದಾನ ಮೀಸಲಿಡಲಾಗಿದೆ.
ಅಲ್ಪ ಸಂಖ್ಯಾತರ ಅಭಿರುದ್ಧಿಗಾಗಿ 4700ಕೊ. ರೂ ಮೀಸಲು. ಬೆಂಗಳೂರಿನ ಅಪರಾಧ ತಡೆಗಾಗಿ 26000 ಸಿಸಿ ಕ್ಯಾಮೆರಾ ಅಳವಡಿಕೆ ಹೀಗೆ 70ಸಾವಿರ ಕೆರೆಗಳಿಗೆ ಮೊದಲ ಹಂತದ ನೀರು ತುಂಬಿಸುವ ಕಾರ್ಯಕ್ಕೆ ಹಣ ಮೀಸಲು. ಹೀಗೆ ಎಲ್ಲಾ ವರ್ಗ ದವರ ಏಳ್ಗೆಗಾಗಿ , ನಕ್ಸಲ್ ಪೀಡಿತ ಪ್ರದೇಶ ದ ಅಭಿರುದ್ದಿಗೆ 10 ಕೊ.ರೂ.ಮಿಸಲು.
ಇವುಗಳ ಜೊತೆ ಗ್ಯಾರಂಟಿ ಯೋಜನೆಗೆ ಯಾವುದೇ ತೊಂದರೆ ಇಲ್ಲದೆ ಮುಂದುವರೆಸುತ್ತ ಅಭಿರುದ್ದಿ ಎತ್ತ ಚಿತ್ತ ನೆಟ್ಟಿರೋದು ಕಂಡು ಬರುತ್ತದೆ ಒಟ್ಟಾರೆಯಾಗಿ ಇದೊಂದು ಸರ್ವರಿಗೂ ಸಮಪಾಲು ಸಮಬಾಳು ಅನ್ನುವಹಾಗೆ ಮೆಚ್ಚುಗೆಯ ಮುಂಗಡಪತ್ರ ಎಂದು
ಅರ್ಥಶಾಸ್ತ್ರ ಉಪನ್ಯಾಸಕರಾದ ಪ್ರೊ. ರಾಜೇಶ ಪಿ. ನೋಟದ ಹೇಳಿದ್ದಾರೆ.