ಹುಬ್ಬಳ್ಳಿ;ಸತತ 16ನೇ ಬಾರಿ ಬಜೆಟ್ ಮಂಡನೆ ಮಾಡಿದ ಸ್ವಘೋಷಿತ ಆರ್ಥಿಕ ತಜ್ಞರಾದ ಸಿಎಂ ಸಿದ್ದರಾಮಯ್ಯನವರ ಈ ಬಾರಿಯ ಬಜೆಟ್ ಕೂಡ ಯಥಾ ಪ್ರಕಾರ ಅತ್ಯಂತ ನಿರಾಶಾದಾಯಕವಾಗಿದೆ ಎಂದು ವಿಧಾನಸಭೆಯ ಉಪನಾಯಕ ಅರವಿಂದ ಬೆಲ್ಲದ ಬೇಸರ ವ್ಯಕ್ತಪಡಿಸಿದ್ದಾರೆ.
ಹಕ್ಕಿಜ್ವರದ ಭೀತಿ: ಬೆಂಗಳೂರಿನಲ್ಲಿ ಸ್ಟ್ರಿಕ್ಟ್ ರೂಲ್ಸ್ ಜಾರಿ! ನಾನ್ ವೆಜ್ ಪ್ರಿಯರೇ ಈ ಸುದ್ದಿ ನೋಡಿ!
ಅಲ್ಪಸಂಖ್ಯಾತರ ಓಲೈಕೆಗಾಗಿಯೇ ತಮ್ಮ ಅಧಿಕಾರವನ್ನು ಮೀಸಲಿಟ್ಟಿರುವ ಕಾಂಗ್ರೆಸ್ ನ ಇಂದಿನ ಬಜೆಟ್ ಕೂಡ ಯಾವ ಆಯಾಮದಲ್ಲೂ ಕರ್ನಾಟಕದ ಬಜೆಟ್ ಎಂದೆನಿಸುವಂತಿಲ್ಲ. ಇದು ರಾಜ್ಯದ ಬಜೆಟ್ಟೋ ಸಾಬರ ಬಜೆಟ್ಟೋ!? ಎಂಬುದೇ ಪ್ರಶ್ನೆಯಾಗಿದೆ. ಇನ್ನು ಉತ್ತರ ಹಾಗೂ ಕಲ್ಯಾಣ ಕರ್ನಾಟಕಕ್ಕಂತೂ ಎಂದಿನಂತೆ ಮಲತಾಯಿ ಧೋರಣೆ ಮುಂದುವರೆಸಿರುವ ಕಾಂಗ್ರೆಸ್ ಸರ್ಕಾರ ಕೇವಲ ಬೆರಳೆಣಿಕೆಯಷ್ಟು ಅನುದಾನವನ್ನು ನೀಡಿ ಮೂಗಿನ ಮೇಲೆ ತುಪ್ಪ ಸುರಿಯುವ ಪ್ರಯತ್ನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಈ ಬಾರಿಯ ಬಜೆಟ್ ನಲ್ಲಾದರೂ ಪ್ರಾತಿನಿಧ್ಯ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಬೇಡಿಕೆ ಇಟ್ಟು ಪತ್ರ ಬರೆದಿದ್ದೆ. ಆದರೆ ಅದನ್ನು ಕಡೆಗಣಿಸಿ, ನಮ್ಮ ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ದ್ರೋಹ ಮಾಡಿದ್ದಾರೆ, ಕಾಂಗ್ರೆಸ್ ಘೋಷಿಸಿದ 4ಲಕ್ಷ ಕೋಟಿ ಮೊತ್ತದ ಬಜೆಟ್ ನಲ್ಲಿ ನಮ್ಮ ಹುಬ್ಬಳ್ಳಿ-ಧಾರವಾಡಕ್ಕೆ 1 ರೂಪಾಯಿಯನ್ನೂ ನೀಡದೇ ದ್ರೋಹ ಬಗೆದಿದೆ ಎಂದು ಗುಡುಗಿದ್ದಾರೆ.