ಚಿತ್ರದುರ್ಗ: ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದೊಯ್ದಿರುವ ಘಟನೆ ಚಿತ್ರದುರ್ಗದ ಚಳ್ಳಕೆರೆಯಲ್ಲಿ ನಡೆದಿದೆ.
ನರಹರಿ ನಗರದ ರವಿಕುಮಾರ್ ಎಂಬುವರು ಚಳ್ಳಕೆರೆಯ ಕರ್ನಾಟಕ ಬ್ಯಾಂಕ್ನಿಂದ 1.40 ಲಕ್ಷ ರೂ. ಹಣವನ್ನು ಡ್ರಾ ಮಾಡಿದ್ದರು. ಆ ಹಣವನ್ನು ಸ್ಕೂಟಿಯಲ್ಲಿ ಇಟ್ಟಿದ್ದರು. ಈ ವೇಳೆ ಸ್ಕೂಟಿ ನಿಲ್ಲಿಸಿ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಕಳ್ಳರು ಹಣವನ್ನು ಕದ್ದಿದ್ದಾರೆ. ಇನ್ನೂ ಈ ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೂವರು ಕಳ್ಳರು ಸೇರಿ ಸ್ಕೂಟಿ ಕಾಣದಂತೆ ಅಡ್ಡ ನಿಂತು, ಅಲ್ಲಿದ್ದ ಹಣವನ್ನು ಕದ್ದು ಎಸ್ಕೇಪ್ ಆಗಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಚಳ್ಳಕೆರೆ ಠಾಣಾ ಪೊಲೀಸರು ಸಿಸಿಟಿವಿ ಕ್ಯಾಮೆರಾದ ದೃಶ್ಯವನ್ನಾಧರಿಸಿ ಕಳ್ಳರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.