ವಿಜಯನಗರ : ರಾಜ್ಯದಲ್ಲಿ ಮತ್ತೆ ಸೌಜನ್ಯ ಪ್ರಕರಣ ಮುನ್ನೆಲೆಗೆ ಬಂದಿದ್ದು, ಇದೀಗ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ತೀವ್ರಗೊಂಡಿದೆ. ವಿಜಯನಗರದ ಹೊಸಪೇಟೆಯಲ್ಲಿ ಸೌಜನ್ಯ ಪರ ಹೋರಾಟ ಮುಂದುವರೆದಿದೆ.
ಎಸ್ಎಫ್ಐ ಮತ್ತು ಡಿವೈಎಫ್ಐನಿಂದ ಹೊಸಪೇಟೆಯ ಡಾ. ಪುನೀತ್ ರಾಜ್ಕುಮಾರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಾನವಿ ಸರಪಳಿ ಮಾಡಿ, ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು ಸೌಜನ್ಯ ಸೇರಿದಂತೆ ಅಸಹಜ ಸಾವುಗಳ ಕುರಿತು ಸಮಗ್ರ ತನಿಖೆಯಾಗಲಿ, ಸೌಜನ್ಯ ಘಟನೆ ಕುರಿತು ಯೂಟ್ಯೂಬರ್ ಸಮೀರ್ ಹೇಳಿದ್ಧಕ್ಕೆ ಬೆದರಿಕೆಗಳು ಹಾಕಲಾಗುತ್ತಿದೆ, ಸಮೀರ್ ಪರ ನಾವು ಇರ್ತೆವೆ, ಸೌಜನ್ಯ ಪ್ರಕರಣ ಕುರಿತು ನಾವು ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ಇಂತಹ ಅಸಹಜ ಪ್ರಕರಣಗಳು, ಸಾವುಗಳ ಕುರಿತು ಸಮಗ್ರ ತನಿಖೆಯಾಗಲಿ. ಅವರ ಕುಟುಂಬಗಳಿಗೆ ನ್ಯಾಯ ಸಿಗಲಿ. ನೊಂದವರ ಪರ ನಾವು ಇರ್ತೇವೆ ಎಂದಿದ್ದಾರೆ.