ಕೋಲಾರ : ಸಿಎಂ ಸಿದ್ದರಾಮಯ್ಯ ಮಂಡನೆ ಮಾಡಿದ ಬಜೆಟ್ ನಲ್ಲಿ ಕೋಲಾರಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ ಎಂದು ಕೋಲಾರದ ಕಾಂಗ್ರೆಸ್ ಕಾರ್ಯಕರ್ತರು ಕೋಲಾರದಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ ,
Budget 2025: ಅತಿಥಿ ಶಿಕ್ಷಕರು, ಬಿಸಿಯೂಟ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ ನೀಡಿದ ಸಿಎಂ!
ಕೋಲಾರ ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಪಟಾಕಿ ಸಿಡಿಸಿದ ಕಾಂಗ್ರೆಸ್ ಅಭಿಮಾನಿಗಳು ಸಿದ್ದರಾಮಯ್ಯ , ಉಸ್ತುವಾರಿ ಸಚಿವ ಬೈರತಿ ಸುರೇಶ್ , ಶಾಸಕ ಕೊತ್ತೂರು ಮಂಜುನಾಥ್ ಪರವಾಗಿ ಘೋಷಣೆ ಕೂಗಿ , ರಾಜ್ಯ ಸರ್ಕಾರ ಕೋಲಾರದ ಅಭಿವೃದ್ಧಿಗೆ ಬಜೆಟ್ ನಲ್ಲಿ ಬಂಪರ್ ಅನುದಾನಗಳನ್ನು ನೀಡಿದೆ. ಅದರಲ್ಲಿ ಕೋಲಾರಕ್ಕೆ ಸಾರ್ವಜನಿಕ -ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜು, ಕೆಜಿಎಫ್ ನಲ್ಲಿ ಹೈಟೆಕ್ ಕೃಷಿ ಮಾರುಕಟ್ಟೆ ನಿರ್ಮಾಣಕ್ಕೆ ಅನುದಾನ, ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಮಹಿಳಾ ಉದ್ಯೋಗಿಗಳಿಗೆ ವಸತಿ ನಿಲಯ ಸ್ಥಾಪನೆ ಮುಂತಾದ ಕೊಡುಗೆಗಳನ್ನು ನೀಡಿರುವುದು ಸಂತಸ ತಂದಿದೆ ಎಂದು ಕಾಂಗ್ರೆಸ್ ಮುಖಂಡರಿಂದ ಪಟಾಕಿ ಹಚ್ಚಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದ್ದಾರೆ.