ಹುಬ್ಬಳ್ಳಿ: ನಕಲಿ ಮದ್ಯ ತಯಾರಿಕೆ ಮಾಡುತ್ತಿದ್ದ ತೋಟದ ಮನೆ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ಹುಬ್ಬಳ್ಳಿಯ ಛಬ್ಬಿ ಗ್ರಾಮದ ಬಳಿ ಜರುಗಿದೆ.
Budget 2025: ಗ್ಯಾರಂಟಿ ಸವಾಲು ನಡುವೆ ಇಂದು 16ನೇ ಬಜೆಟ್ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ..!
ಇಬ್ಬರು ಖದೀಮರು, ತೋಟದ ಮನೆಯಲ್ಲಿ ನಕಲಿ ಮದ್ಯ ತಯಾರಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದರು. ಅಬಕಾರಿ ಎಸ್ ಪಿ ವಿಜಯ ಕುಮಾರ್ ಹಿರೇಮಠ್ ರಿಂದ ದಾಳಿ ನಡೆದಿದ್ದು, ಅಪಾರ ಪ್ರಮಾಣದ ನಕಲಿ ಮದ್ಯ ಹಾಗೂ ಇತರ ವಸ್ತುಗಳು ವಶಕ್ಕೆ ಪಡೆಯಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಅಬಕಾರಿ ಉಪಆಯುಕ್ತ ರಮೇಶ್ ಕುಮಾರ್ ಹೆಚ್ ಮಾಹಿತಿ ನೀಡಿದ್ದಾರೆ. ಬೆಳಗಾವಿ ಅಧಿಕ್ಷಕರು, ಹುಬ್ಬಳ್ಳಿ ಅಬಕಾರಿ ತಂಡದಿಂದ ದಾಳಿ ಮಾಡಲಾಗಿದೆ. ಹುಬ್ಬಳ್ಳಿಯ ಛಬ್ಬಿಗ್ರಾಮದಿಂದ ಬೊಮ್ಮಸಂದ್ರ ಗ್ರಾಮದ ಮಾರ್ಗದ ತೋಟದ ಮನೆಯಲ್ಲಿ ನಕಲಿ ಮದ್ಯ ತಯಾರಿಸಲಾಗುತ್ತಿತ್ತು. ನಕಲಿ ಮದ್ಯ ತಯಾರು ಮಾಡ್ತಿದ್ದ ಇಬ್ಬರನ್ನ ನಾವು ಬಂಧನ ಮಾಡಿದ್ದೇವೆ.
ನಕಲಿ ಲೇಬಲ್, ಭದ್ರಾತಾ ಚೀಟಿ ಸೇರಿ ಹಲವು ವಸ್ತುಗಳನ್ನ ಅಬಕಾರಿ ಅಪರ ಆಯುಕ್ತ ಅಧಿಕಾರಿ ಮಂಜುನಾಥ್ ಹಾಗೂ ಬೆಳಗಾವಿ ಜೆಸಿ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ. ದಾಳಿ ಮಾಡಿದಾಗ ಇಬ್ಬರು ಯುವಕರು ನಕಲಿ ಮದ್ಯ ತಯಾರು ಮಾಡ್ತಿದ್ರು. ಇದರಲ್ಲಿ ಸರ್ಕಾರಿ ಮಾನ್ಯತೆ ಪಡೆದದ್ದು ಯಾವುದು ಇರಲಿಲ್ಲ. ಹೀಗಾಗಿ ಇಬ್ಬರ ಮೇಲೆ ಮೊಕದ್ದಮೆ ದಾಖಲು ಮಾಡಿದ್ದೇವೆ. 5 ಲಕ್ಷ ಮೌಲ್ಯದ ಮದ್ಯ ಹಾಗೂ ವಸ್ತುಗಳನ್ನ ವಶಕ್ಕೆ ಪಡೆದಿದ್ದೇವೆ
ಹುಬ್ಬಳ್ಳಿ ಮೂಲದ ಸಂದೀಪ್ ಹಾಗೂ ಅಮೃತ ಎಂಬ ಆರೋಪಿಗಳನ್ನ ವಶಕ್ಕೆ ಪಪಡೆಯಲಾಗಿದೆ ಇನ್ನೊಬ್ಬ ಆರೋಪಿಗಾಗಿ ಹುಡುಕ್ತಾ ಇದ್ದೇವೆ. ಮನೆಯ ಮಾಲೀಕರಿಗೂ ಆರೋಪಿಗಳಿಗೂ ಸಂಬಂಧ ಇಲ್ಲಾ. ಮಾಲೀಕರಿಗೂ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ನಾವು ಸ್ಥಳೀಯ ಪೋಲೀಸರ ಬೆಂಬಲದಿಂದಲೇ ದಾಳಿ ಮಾಡಿದ್ದೇವೆ. ಗೊಬ್ಬರ ಅಂಗಡಿ ಇಡೋದಾಗಿ ಹೇಳಿ ಬಾಡಿಗೆಗೆ ತಗೊಂಡಿದ್ದಾರೆ. ಮದ್ಯ, ಬಾಟಲಿ, ಲೇಬಲ್ ಎಲ್ಲವು ಕೂಡ ನಕಲಿ ಇವೆ. ಇದರ ಹಿಂದಿನ ಜಾಲದ ಪತ್ತೆಗೆ ಜಾಲ ಬೀಸಿದ್ದೇವೆ. ಒಟ್ಟು 24 ಬಾಕ್ಸ್ ಗಳು ಪತ್ತೆಯಾಗಿದ್ದು, 23 ಬಾಟಲ್ ನ್ನ ಪರೀಕ್ಷೆಗೆ ಕಳಸ್ತಾ ಇದ್ದೇವೆ ಎಂದು ಮಾಹಿತಿ ನೀಡಿದ್ದಾರೆ.