ಮಂಡ್ಯ:- ವಸತಿ ಶಾಲೆಯಲ್ಲಿ ಮಕ್ಕಳ ಊಟ, ತಿಂಡಿಗೂ ಪ್ರಾಂಶುಪಾಲೆ ಕನ್ನ ಹಾಕುತ್ತಿದ್ದು, ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿರುವ ಘಟನೆ ಮಂಡ್ಯದಲ್ಲಿ ಜರುಗಿದೆ.
ಫ್ಯಾನ್ಸ್ ಗೆ ಸಿಕ್ತು ಗುಡ್ ನ್ಯೂಸ್: ಯೋಗರಾಜ್ ಭಟ್ ಜೊತೆ ರಮ್ಯಾ ಸಿನಿಮಾ!
ಇನ್ನೂ ಈ ಬಗ್ಗೆ ಪ್ರಶ್ನೆ ಮಾಡಿದ ವಿದ್ಯಾರ್ಥಿಗಳ ಮೇಲೆ ವಸತಿ ಶಾಲೆ ಪ್ರಾಂಶುಪಾಲೆಯ ದೌರ್ಜನ್ಯ ಎಸಗಿದ್ದಾರೆ. ಇದೀಗ ದೌರ್ಜನ್ಯ ನಡೆಸ್ತಿರೋ ಪ್ರಾಂಶುಪಾಲೆ ವಿರುದ್ದ ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ. ಕಾಳಿಂಗನಹಳ್ಳಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಘಟನೆ ಜರುಗಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕಾಳಿಂಗನಹಳ್ಳಿಯಲ್ಲಿರುವ ವಸತಿ ಶಾಲೆಯಲ್ಲಿ ಸರಿಯಾಗಿ ಊಟ ತಿಂಡಿ ಕೊಡಿ ಎಂದಿದ್ದಿದ್ದಕ್ಕೆ ವಿದ್ಯಾರ್ಥಿಗಳಿಗೆ ಪಾಂಶುಪಾಲೆ ಕಿರುಕುಳ ಕೊಟ್ಟಿದ್ದಾರೆ. ವಸತಿ ಶಾಲೆಯ ಪ್ರಾಂಶುಪಾಲೆ ದೀಪಾಶೇಠ್ ಕಿರುಕುಳಕ್ಕೆ ಈಗಾಗಲೇ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಗಳು ಶಾಲೆ ತೊರೆದಿದ್ದಾರೆ. ನೆನ್ನೆ ಸಂಜೆ ಕೂಡ ಪ್ರಾಂಶುಪಾಲೆ ಕಿರುಕುಳದಿಂದ ವಸತಿ ಶಾಲೆ ಕಾಂಪೋಡ್ 20 ಕ್ಕು ವಿದ್ಯಾರ್ಥಿಗಳು ಹಾರಿ ಬಂದಿದ್ದರು. ಹೊರ ಬಂದು ತಮ್ಮ ಪೋಷಕರಿಗೆ ಕರೆ ಮಾಡಿ ಕಿರುಕುಳದ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಕೂಡಲೇ ಮಕ್ಕಳ ಸಮಸ್ಯೆ ಕಂಡು ಶಾಲೆಗೆ ಬಂದ ಪೋಷಕರು ಪ್ರಾಂಶುಪಾಲೆಯ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಶಾಲೆಯ ಮಕ್ಕಳಿಗೆ ಸರೊಯಾಗಿ ಊಟ ತಿಂಡಿ ಕೊಡದೆ ಕಿರುಕುಳ ನೀಡುತ್ತಿರುವ ಪ್ರಾಂಶುಪಾಲೆ ಅಮಾನತ್ತಿಗೆ ಆಗ್ರಹ ಕೇಳಿ ಬಂದಿದೆ.