ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ತುಂಬಾನೇ ಒಳ್ಳೇದು. ಬಿಸಿ ಇರೋದ್ರಿಂದ ಬೇಸಿಗೆಯಲ್ಲಿ ಡ್ರೈ ಫ್ರೂಟ್ಸ್ ತಿನ್ನೋಕೆ ಜನ ಹಿಂಜರಿಯೋದುಂಟು, ಆದ್ರೆ ಡ್ರೈ ಫ್ರೂಟ್ಸ್ ಸರಿಯಾಗಿ ತಿಂದ್ರೆ ದೇಹಕ್ಕೆ ಸಿಕ್ಕಾಪಟ್ಟೆ ಲಾಭಗಳಿವೆ. ನೆನೆಸಿರೋ ಡ್ರೈ ಫ್ರೂಟ್ಸ್ ಅಥವಾ ತಣ್ಣಗಿನ ಹಾಲಿನ ಜೊತೆ ತಿಂದ್ರೆ ದೇಹಕ್ಕೆ ತಂಪು ಸಿಗುತ್ತೆ ಮತ್ತೆ ಬೇಕಾದ ಪೋಷಕಾಂಶಾನೂ ಸಿಗುತ್ತೆ.
ಸೌಜನ್ಯ ಬಗ್ಗೆ ವಿಡಿಯೋ ಮಾಡಿದ್ದ ಸಮೀರ್ ವಿರುದ್ಧ FIR; ಪೊಲೀಸರ ನಡೆಗೆ ಹೈಕೋರ್ಟ್ ಅಸಮಾಧಾನ!
ಹಲವಾರು ಬೇರೆ ಬೇರೆ ಪ್ರಯೋಜನಗಳನ್ನು ನಾವು ಡ್ರೈ ಫ್ರೂಟ್ಸ್ ಗಳಿಂದ ನಿರೀಕ್ಷಿಸಬಹುದು. ಆದರೆ ಇದು ಎಲ್ಲಾ ಸಂದರ್ಭದಲ್ಲಿಯೂ ಒಂದೇ ರೀತಿ ಇರುವುದಿಲ್ಲ. ಉದಾಹರಣೆಗೆ ಬೇಸಿಗೆ ಸಂದರ್ಭದಲ್ಲಿ ಡ್ರೈ ಫ್ರೂಟ್ಸ್ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತದೆ ಎಂದು ತಿಳಿದು ಬಂದಿದೆ. ಹೀಗಾಗಿ ಈ ಕೆಳಗಿನ ಡ್ರೈ ಫ್ರೂಟ್ಸ್ ಗಳನ್ನು ಬೇಸಿಗೆ ಕಳೆಯುವವರೆಗೆ ತಿನ್ನದೇ ಇರುವುದು ಉತ್ತಮ.
ಖರ್ಜೂರ ತಿನ್ನಲು ಬಹಳ ಸಿಹಿಯಾಗಿರುತ್ತದೆ. ಅಂದರೆ ಇದರಲ್ಲಿ ನೈಸರ್ಗಿಕವಾಗಿ ಮೊದಲೇ ಸಿಹಿ ಪ್ರಮಾಣ ತುಂಬಿರುತ್ತದೆ.
ಬೇಸಿಗೆಯಲ್ಲಿ ಬಿಸಿಲಿನ ತಾಪ ಜೋರಾಗಿರುವುದರಿಂದ ಸುತ್ತಲಿನ ವಾತಾವರಣ ನಮ್ಮ ದೇಹಕ್ಕೆ ಹೆಚ್ಚಿನ ತಾಪಮಾನ ನೀಡುತ್ತದೆ. ಈ ರೀತಿ ಇರುವ ಸಂದರ್ಭದಲ್ಲಿ ಖರ್ಜೂರ ಸೇವನೆ ಮಾಡಿದರೆ ಅದರಿಂದ ನಮ್ಮ ದೇಹದ ತಾಪಮಾನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಬಾದಾಮಿ ಬೀಜಗಳಲ್ಲಿ ಪೌಷ್ಟಿಕಾಂಶಗಳ ಪ್ರಮಾಣ ಹೇರಳವಾಗಿದೆ. ನಮ್ಮ ದೇಹದ ತಾಪಮಾನವನ್ನು ಹೆಚ್ಚಿಸುವ ಗುಣ ಕೂಡ ಇವುಗಳಲ್ಲಿ ಕಂಡು ಬರುತ್ತದೆ. ಬಾದಾಮಿ ಬೀಜಗಳನ್ನು ಬೇಸಿಗೆ ದಿನಗಳಲ್ಲಿ ಮಿತಿ ಯಾಗಿ ತಿಂದರೆ ಒಳ್ಳೆಯದು. ಸೂಕ್ಷ್ಮ ಆರೋಗ್ಯ ಇರುವವರು ಇವುಗಳಿಂದ ದೂರವಿರಿ.
ಹೆಚ್ಚಿನ ಕೊಬ್ಬಿನ ಅಂಶ ಇರುವ ಗೋಡಂಬಿ ಬೀಜಗಳು ಆರೋಗ್ಯಕ್ಕೆ ಒಂದು ರೀತಿಯ ಸಮತೋಲನದ ಪೌಷ್ಟಿಕಾಂಶಗಳನ್ನು ಕೊಡುತ್ತದೆ. ಆದರೂ ಕೂಡ ಇವುಗಳನ್ನು ಹೆಚ್ಚಾಗಿ ತಿಂದರೆ ದೇಹದ ತಾಪಮಾನ ಹೆಚ್ಚುತ್ತದೆ. ದೇಹದ ಅನಾರೋಗ್ಯಕ್ಕೆ ಕಾರಣವಾಗುತ್ತದೆ
ಒಮೆಗಾ 3 ಫ್ಯಾಟಿ ಆಮ್ಲಗಳನ್ನು ಹೆಚ್ಚಾಗಿ ಒಳಗೊಂಡಿರುವ ವಾಲ್ನಟ್ ಬೀಜಗಳು ನಮ್ಮ ದೇಹದ ತಾಪಮಾನವನ್ನು ಹೆಚ್ಚಿಸುವ ಗುಣವನ್ನು ಪಡೆದಿವೆ. ವಾಲ್ನಟ್ ಬೀಜಗಳನ್ನು ಸಹ ಬೇಸಿಗೆಯಲ್ಲಿ ಮಿತವಾಗಿ ಸೇವಿಸ ಬೇಕು. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು
ತಿನ್ನಲು ಪಿಸ್ತಾ ಬೀಜಗಳು ಬಹಳ ಚೆನ್ನಾಗಿರುತ್ತವೆ. ಆದರೆ ಬೇಸಿಗೆ ದಿನ ಗಳಲ್ಲಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಇರುವವರು ಇವುಗಳಿಂದ ದೂರ ಇದ್ದರೆ ವಾಸಿ. ಏಕೆಂದರೆ ಪಿಸ್ತಾ ಬೀಜಗಳು ಸ್ವಲ್ಪ ಹೊತ್ತು ಕಳೆದ ನಂತರ ದೇಹದಲ್ಲಿ ಉಷ್ಣ ಪ್ರಭಾವವನ್ನು ಉಂಟು ಮಾಡುತ್ತವೆ.
ವಿವಿಧ ಸಿಹಿ ಖಾದ್ಯಗಳಲ್ಲಿ ಹೆಚ್ಚಾಗಿ ಬಳಸುವ ಒಣ ದ್ರಾಕ್ಷಿ ನಮ್ಮ ದೇಹದ ತಾಪಮಾನವನ್ನು ಹೆಚ್ಚಿಸುವ ಗುಣವನ್ನು ಹೊಂದಿವೆ. ಹೀಗಾಗಿ ತಂಪಾದ ಆಹಾರ ಪದಾರ್ಥಗಳಲ್ಲಿ ಒಣದ್ರಾಕ್ಷಿಯನ್ನು ಬಳಸಬಹುದು ಆದರೆ ಬೇಸಿಗೆಯಲ್ಲಿ ಹಾಗೆ ತಿನ್ನಬಾರದು ಎನ್ನುತ್ತಾರೆ.
ಅಂಜೂರದ ಹಣ್ಣುಗಳು ನಮ್ಮ ದೇಹಕ್ಕೆ ಉಷ್ಣ ಪ್ರಭಾವವನ್ನು ಉಂಟು ಮಾಡುತ್ತವೆ. ದೈಹಿಕ ತಾಪಮಾನವನ್ನು ಹೆಚ್ಚಿಸುವ ಗುಣವನ್ನು ಹೊಂದಿರುವ ಅಂಜೂರದ ಹಣ್ಣನ್ನು ಬೇಸಿಗೆ ಸಂದರ್ಭದಲ್ಲಿ ಮಿತವಾಗಿ ಸೇವಿಸಬೇಕು ಅಥವಾ ಸೇವಿಸುವುದರಿಂದ ದೂರ ಉಳಿಯಬೇಕು.
ಹೆಚ್ಚಿನ ಕೊಬ್ಬಿನ ಪ್ರಮಾಣವನ್ನು ಒಳಗೊಂಡಿರುವ ಬ್ರೆಜಿಲ್ ನಟ್ ನಮ್ಮ ದೇಹಕ್ಕೆ ಶಕ್ತಿ ಚೈತನ್ಯವನ್ನು ಕೊಡುತ್ತದೆ ನಿಜ. ಆದರೆ ಅಷ್ಟೇ ಪ್ರಮಾಣ ದಲ್ಲಿ ನಮ್ಮ ದೇಹದ ಉಷ್ಣಾಂಶವನ್ನು ಕೂಡ ಹೆಚ್ಚಿಸುತ್ತದೆ. ಬೇಸಿಗೆಯ ಸಂದರ್ಭದಲ್ಲಿ ಆರೋಗ್ಯದ ದೃಷ್ಟಿಯಲ್ಲಿ ನೋಡುವುದಾದರೆ, ಬ್ರೆಜಿಲ್ ನಟ್ ಸೇವಿಸುವುದರಿಂದ ದೇಹದ ತಾಪಮಾನ ಹೆಚ್ಚುತ್ತದೆ.