ಬೆಂಗಳೂರು:– ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಜಿ ಪರಮೇಶ್ವರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದಾಗಿನಿಂದ ಕೊಲೆಗಳ ಸಂಖ್ಯೆ ಕಡಿಮೆ ಆಗಿದೆ. ಹೀಗಾಗಿ ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಉತ್ತಮವಾಗಿದೆ ಎಂದು ಬೆನ್ನು ತಟ್ಟಿಕೊಂಡರು.
ಬೆಂಗಳೂರಿನಲ್ಲಿ ವೀಲ್ಹಿಂಗ್ ಮಾಡುವ ಪುಂಡರ ಮೇಲೆ ಕೇಸ್ ಹಾಕಲಾಗಿದೆ. 2023ರಲ್ಲಿ 242 ಕೇಸ್ ದಾಖಲು ಮಾಡಿದ್ದು, 207 ಜನರ ಬಂಧನ ಮಾಡಲಾಗಿದೆ. 2024ರಲ್ಲಿ 532 ಕೇಸ್ ದಾಖಲು ಮಾಡಿದ್ದು, 479 ಜನರ ಬಂಧನ ಮಾಡಲಾಗಿದೆ. 2025ರಲ್ಲಿ 114 ಕೇಸ್ ದಾಖಲು ಆಗಿದ್ದು, 102 ಜನರ ಬಂಧನ ಮಾಡಲಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ಎಎಸ್ಐಗಳಿಗೆ ಗನ್ ಕೊಡುವ ಕೆಲಸ ಮಾಡ್ತಿದ್ದೇವೆ. 24 ಗಂಟೆ ಬೀಟ್ ವ್ಯವಸ್ಥೆ ಮಾಡ್ತಿದ್ದೇವೆ. ಕಾನೂನು ಸುವ್ಯವಸ್ಥೆ ಹಾಳು ಮಾಡುವವರಿಗೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಲಂಡನ್ ಮಾದರಿಯಲ್ಲಿ ಪೊಲೀಸ್ ವ್ಯವಸ್ಥೆ ಮಾಡಿದ್ದೇವೆ. ಇದಕ್ಕಾಗಿ ವಿಶೇಷ ಕಂಟ್ರೋಲ್ ರೂಂ ಮಾಡಲಾಗಿದೆ. ಕಂಟ್ರೋಲ್ ರೂಂಗೆ ಕರೆ ಮಾಡಿದ 9 ನಿಮಿಷಗಳಲ್ಲಿ ಪೊಲೀಸರು ರೀಚ್ ಆಗುತ್ತಾರೆ. ಮಹಿಳಾ ಸುರಕ್ಷತೆಗೆ ಪಿಂಕ್ ಹೊಯ್ಸಳ ಮಾಡಿದ್ದೇವೆ. ಶಾಂತಿ ಸಭೆ, ಮೊಹಲ್ಲಾಗಳಲ್ಲಿ ಸಭೆ ಮಾಡ್ತೀವಿ. ಎಫೆಕ್ಟೀವ್ ಆಗಿ ಕೆಲಸ ಮಾಡ್ತಿದ್ದೇವೆ ಎಂದರು.