ಇಡ್ಲಿ ಅಂದ್ರೆ ನೆನಪಾಗುವುದೇ ದಕ್ಷಿಣ ಭಾರತೀಯನ್ನರು. ವಾರಾಂತ್ಯ ಬಂತೆಂದರೆ ಮನೆಯಲ್ಲಿ ಬಹುತೇಕರು ಒಂದು ವಾರದ ಮಟ್ಟಿಗೆ ಆಗುವಷ್ಟು ಇಡ್ಲಿ, ದೋಸೆ ಹಿಟ್ಟು ರುಬ್ಬಿಕೊಂಡು ಫ್ರಿಡ್ಜ್ನಲ್ಲಿ ಇಡುತ್ತಾರೆ. ಅದರ ನಂತರ, ತಮಗೆ ಯಾವಾಗ ಬೇಕೋ ಆಗ ಅಂದ್ರೆ, ಬೆಳಗ್ಗೆ ಮತ್ತು ರಾತ್ರಿ ವೇಳೆಯಲ್ಲಿ ಇಡ್ಲಿ ಮತ್ತು ದೋಸೆಯನ್ನು ಸಿದ್ಧಪಡಿಸುತ್ತಾರೆ. ಆದರೆ, ವಾರದ ಕೊನೆಯ ಮೂರು ದಿನಗಳ ನಂತರ, ಕೆಲವೊಮ್ಮೆ ಹಿಟ್ಟು ಹುಳಿಯಾಗುತ್ತದೆ. ಅನೇಕರು ಅದನ್ನು ಎಸೆಯುತ್ತಾರೆ. ಆದರೆ, ಕೆಲವು ಸಲಹೆಗಳನ್ನು ಅನುಸರಿಸುವುದರಿಂದ, ಆ ಹಿಟ್ಟಿನ ಹುಳಿಯನ್ನು ಕಡಿಮೆ ಮಾಡಬಹುದು. ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳ ಮನೆ-ಹೋಟೆಲ್ಗಳಲ್ಲಿ ಇದು ತುಂಬಾನೇ ಫೇಮಸ್. ಹೀಗಾಗಿ ಬೆಳಗ್ಗೆಯೇ ಬಹುತೇಕ ಮನೆಗಳಲ್ಲಿ ಇಡ್ಲಿ, ದೋಸೆಯನ್ನು ಜನ ಹೆಚ್ಚಾಗಿ ತಿಂಡಿಯನ್ನಾಗಿ ಮಾಡಿ ಸೇವಿಸುತ್ತಾರೆ.
Drinking Water: ಕುಡಿಯಲು ಬಿಸಿ ನೀರು ಒಳ್ಳೆಯದೋ? ಫಿಲ್ಟರ್ ವಾಟರ್ ಒಳ್ಳೆಯದೋ?- ಇಲ್ಲಿದೆ ಬೆಸ್ಟ್ Answer!
ಹೌದು, ದಕ್ಷಿಣ ಭಾರತದ ಸಾಂಪ್ರದಾಯಿಕ ಆಹಾರದಲ್ಲಿ ಇಡ್ಲಿ ತುಂಬಾ ಪ್ರಸಿದ್ಧಿ ಪಡೆದಿರುವ ತಿಂಡಿ. ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡಿನಲ್ಲಿ ಇಡ್ಲಿಯನ್ನು ಹಲವು ರೀತಿಯಲ್ಲಿ ಮಾಡಲಾಗುತ್ತದೆ. ಅಕ್ಕಿ ಇಡ್ಲಿ, ರವೆ ಇಡ್ಲಿ, ಮಲ್ಲಿಗೆ ಇಡ್ಲಿ, ತಟ್ಟೆ ಇಡ್ಲಿ ಹೀಗೆ ವಿಧವಿಧವಾದ ಇಡ್ಲಿಗಳಿವೆ.
ಅದರಲ್ಲೂ ಇಡ್ಲಿ ವಡೆ ಕಾಂಬಿನೇಷನ್ ಬಗ್ಗೆ ಹೇಳಲೇ ಬೇಕಾಗಿಲ್ಲ. ಈ ಕಾರಣದಿಂದಾಗಿ ಇಡ್ಲಿ ಬಹಳಷ್ಟು ಜನರಿಗೆ ಫೇವರೆಟ್ ತಿಂಡಿ. ಅದರಲ್ಲೂ ಬೆಳಗಿನ ಸಮಯದಲ್ಲೇ ಬಿಸಿ ಬಿಸಿ ಇಡ್ಲಿ ಸಾಂಬರ್ ತಿನ್ನುವುದರಲ್ಲಿ ಸಿಗುವ ಮಜಾನೇ ಬೇರೆ, ಇನ್ನೂ ಪಕ್ಕದಲ್ಲಿ ಒಂದು ಕಪ್ ತೆಂಗಿನಕಾಯಿ ಚಟ್ನಿ ಇದ್ದರಂತೂ ಕೇಳುವುದೇ ಬೇಡ, ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.
ನಮ್ಮಲ್ಲಿ ಅನೇಕ ಮಂದಿ ಬೆಳಗ್ಗೆ ಮತ್ತು ಸಂಜೆ ಎರಡೂ ಸಮಯದಲ್ಲೂ ಇಡ್ಲಿ ಮತ್ತು ದೋಸೆ ಮುಖ್ಯ ಆಹಾರವಾಗಿ ಸೇವಿಸುತ್ತಾರೆ. ಆದ್ದರಿಂದ, ಮನೆಯಲ್ಲಿ ಹಿಟ್ಟನ್ನು ರುಬ್ಬಿ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸುವ ಅಭ್ಯಾಸ ಹೊಂದಿರುತ್ತಾರೆ. ಈ ರೀತಿ ಮಾಡುವುದರಿಂದ ತಮಗೆ ಬೇಕಾದಗಲೆಲ್ಲಾ ಸುಲಭವಾಗಿ ಇಡ್ಲಿ ಮಾಡಿ ಸವಿಯಬಹುದಾಗಿದೆ.
ಆದರೆ, ಬೇಸಿಗೆಕಾಲದಲ್ಲಿ ಇಡ್ಲಿ ಹಿಟ್ಟನ್ನು ರುಬ್ಬಿ ಸ್ವಲ್ಪ ಸಮಯದವರೆಗೆ ಹೊರಗೆ ಬಿಟ್ಟರೆ, ಹಿಟ್ಟು ಬೇಗನೆ ಹುಳಿಯಾಗುತ್ತದೆ. ಕೆಲವೊಮ್ಮೆ ಇಡ್ಲಿ ಹಿಟ್ಟನ್ನು ಫ್ರಿಡ್ಜ್ನಿಂದ ಹೊರತೆಗೆದು ಬೇಯಿಸಿದರೂ ಸಹ, ಹಿಟ್ಟು ಹುಳಿಯಾಗಿಯೇ ಇರುತ್ತದೆ.
ಹಿಟ್ಟು ಹುದುಗಿದರೆ, ಇಡ್ಲಿ ಮತ್ತು ದೋಸೆಗಳು ಸರಿಯಾಗಿ ಬರುವುದಿಲ್ಲ ಮತ್ತು ರುಚಿ ಕೂಡ ಬದಲಾಗುತ್ತದೆ. ಆದರೆ, ಇಡ್ಲಿ ಹಿಟ್ಟು ಹುಳಿಯಾಗದಂತೆ ತಡೆಗಟ್ಟಲು ಕೆಲವು ಸಿಂಪಲ್ ಟಿಪ್ಸ್ ಫಾಲೋ ಮಾಡಬಹುದು. ಅದೇಗಪ್ಪಾ ಅಂದರೆ ಕೇವಲ ತೆಂಗಿನ ಕಾಯಿಯ ಬಳಸುವುದು. ಹೌದು, ತೆಂಗಿನಕಾಯಿಯನ್ನು ತುರಿದು ಮಿಕ್ಸಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಈ ಮಿಶ್ರಣದಿಂದ ತೆಂಗಿನ ಹಾಲನ್ನು ಮಾತ್ರ ತೆಗೆದುಕೊಂಡು ಹಿಟ್ಟಿಗೆ ಸೇರಿಸಿ.
ಆದರೆ ಇಡ್ಲಿ ಮಾಡುವಾಗ ನೀರು ಕಡಿಮೆ ಹಾಕಿ ತೆಂಗಿನಕಾಯಿ ಹಾಲನ್ನು ಹೆಚ್ಚಾಗಿ ಹಾಕಿ. ಒಂದು ವೇಳೆ ಇದೇ ಹಿಟ್ಟಿನಲ್ಲಿ ದೋಸೆ ಮಾಡುವುದಾದರೆ ಸ್ವಲ್ಪ ನೀರು ಸೇರಿಸಿ ರುಬ್ಬಬಹುದು. ಯಾವಾಗಲೂ ತೆಂಗಿನ ಹಾಲನ್ನು ಬೆರೆಸಿದ ಹಿಟ್ಟು ಹುಳಿಯಾಗುವುದಿಲ್ಲ. ಈ ಹಿಟ್ಟನ್ನು ಬಳಸಿ ನೀವು ರುಚಿಕರವಾದ ಇಡ್ಲಿ ಮತ್ತು ದೋಸೆಗಳನ್ನು ಮಾಡಬಹುದಾಗಿದೆ