ಬೆಂಗಳೂರು: ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟಿ ರನ್ಯಾ ಲಾಕ್ ಆಗಿದ್ದಾರೆ. ಕೇಸ್ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕೆಲವು ಮಹತ್ವದ ಅಂಶಗಳನ್ನು ಹೊರಗೆ ಹಾಕಿದ್ದಾರೆ. ತಾನು ಇದೇ ಮೊದಲ ಬಾರಿಗೆ ಚಿನ್ನ ತಂದಿರುವುದಾಗಿ ನಟಿ ಹೇಳಿಕೊಂಡಿದ್ದಾರೆ. ಅಲ್ಲದೆ ಚಿನ್ನವನ್ನು ಕಳ್ಳಸಾಗಣೆ ಮಾಡುವಂತೆ ನನಗೆ ಬೆದರಿಕೆ ಹಾಕಲಾಗಿತ್ತು ಎಂದು ಸಹ ರನ್ಯಾ ಹೇಳಿದ್ದಾರೆ.
Home Buying: ನಿಮ್ಮ ಹೆಂಡತಿಯ ಹೆಸರಿನಲ್ಲಿ ಮನೆ ಖರೀದಿಸುವುದು ಲಾಭದಾಯಕ..! ಏಕೆ ಗೊತ್ತಾ..?
ಒಂದಷ್ಟು ಜನ ಸೇರಿ ನನ್ನನ್ನ ಟ್ರ್ಯಾಫ್ ಮಾಡಿದ್ದಾರೆ. ಹಾಗಾಗಿಯೇ ನಾನು ಈ ಕೆಲಸ ಮಾಡಿದ್ದೀನಿ ಅಂತ ರನ್ಯಾ ಹೇಳಿಕೊಂಡಿದ್ದಾಳೆ. ಹಾಗಾದರೆ, ನಟಿ ಯಾವ ಟ್ರ್ಯಾಪ್ಗೆ ಒಳಗಾದರು? ಟ್ರ್ಯಾಪ್ ಮಾಡಿದ್ದು ಯಾರು? ಯಾಕಾಗಿ ಟ್ರ್ಯಾಫ್ ಮಾಡಿದ್ರು ಎಂಬ ಪ್ರಶ್ನೆಗಳನ್ನು ಡಿಆರ್ಐ ಅಧಿಕಾರಿಗಳು ನಟಿ ಮುಂದಿಟ್ಟಿದ್ದಾರೆ. ಆದರೆ, ಉತ್ತರ ನೀಡಲು ನಟಿ ನಕಾರ ಮಾಡಿದ್ದಾರೆ.