ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಉಸ್ತುವಾರಿ ಸಚಿವ ಮತ್ತು ಬಿಜೆಪಿ ಶಾಸಕರ ನಡುವಿನ ಪ್ರತಿಷ್ಠೆ ಚುನಾವಣೆ ಇದಾಗಗಿದ್ದು, ಅಂತೂ ಚುನಾವಣಾ ದಿನಾಂಕ ಪ್ರಕಟಗೊಂಡಿದೆ.
ಮುಂಬರುವ ಮಾ.15ರಂದು ಮೇಯರ್, ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಬೆಳಗಾವಿ ಪ್ರಾದೇಶಿಕ ಆಯುಕ್ತರಿಂದ ಚುನಾವಣೆ ದಿನಾಂಕ ನಿಗದಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಮಾ.15ರ ಬೆಳಗ್ಗೆ 9 ಗಂಟೆಯಿಂದ 11 ಗಂಟೆ ಒಳಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ.
ಬ್ರಿಮ್ಸ್ ಆಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಭೇಟಿ
ಮೇಯರ್ ಸ್ಥಾನ ಸಾಮಾನ್ಯ ಪುರುಷ, ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಕುಂದಾನಗರಿಯಲ್ಲಿ ಕಾಂಗ್ರೆಸ್ ಬಿಜೆಪಿ ಮಧ್ಯೆ ಮತ್ತೊಂದು ರಾಜಕೀಯ ಕುಸ್ತಿ ನಡೆಯಲಿದೆ. ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಬಿಜೆಪಿ ಶಾಸಕ ಅಭಯ ಪಾಟೀಲ್ ಗೆ ಪ್ರತಿಷ್ಠೆ ಚುನಾವಣೆ ಇದಾಗಗಿದ್ದು, ಅಧಿಕಾರ ಹಿಡಿಯುವುದಕ್ಕೆ ಎರಡು ರಾಷ್ಟ್ರೀಯ ಪಕ್ಷದ ಮಧ್ಯೆ ಕಸರತ್ತು ನಡೀತಿದೆ. ಇಬ್ಬರು ಸದಸ್ಯರ ಸದಸ್ಯತ್ವ ರದ್ದಾದರೂ ಸಹ ಬಿಜೆಪಿಗೆ ಸ್ಪಷ್ಟವಾದ ಬಹುಮತವಿದೆ. ಆದರೆ ವಿಜಯಪುರ ಮಾದರಿಯಲ್ಲಿ ಕಾಂಗ್ರೆಸ್ ಸಂಖ್ಯಾಬಲ ಹೆಚ್ಚಿಸಿಕೊಂಡ್ರೆ ಅಚ್ಚರಿ ಫಲಿತಾಂಶ ಹೊರಬೀಳುವ ಸಾಧ್ಯತೆಯು ಹೆಚ್ಚಿದೆ.
ಸದ್ಯ ಇಬ್ಬರು ಸದಸ್ಯತ್ವ ರದ್ದಾಗಿದ್ದರಿಂದ ಪಾಲಿಕೆ ಒಟ್ಟು ಸಂಖ್ಯಾಬಲ 56 ಕ್ಕೆ ಕುಸಿತಗೊಂಡಿದೆ. ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಶಾಸಕರು, ಸಂಸದರು, ಎಂಎಲ್ ಸಿ ಗಳಿಗೆ ಮತದಾನ ಮಾಡೋ ಹಕ್ಕು ಇದೆ. ಈ ಚುನಾಯಿತ ಪ್ರತಿನಿಧಿಗಳು ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ ಮತದಾರರ ಕಾರ್ಡು, ಆಧಾರ ಕಾರ್ಡ್ ಹೊಂದಿರಬೇಕು ಇನ್ನೂ ಶಾಸಕರ ಮೂಲಕ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರು ಸಹ ಮತದಾನ ಮಾಡೋ ಹಕ್ಕು ಹೊಂದಿದ್ದಾರೆ. ಸದ್ಯ ನಾಗರಾಜ್ ಯಾದವ್ ಬೆಳಗಾವಿ ಜಿಲ್ಲೆ ಕೆಡಿಪಿ ಸಭೆಯಲ್ಲಿ ನಿರಂತರವಾಗಿ ಪಾಲ್ಗೊಳ್ಳಲುತ್ತಿದ್ದಾರೆ. ಅದೇ ಇತ್ತೀಚೆಗೆ ಕಂಡಕ್ಟರ್ ಹಲ್ಲೆ ಪ್ರಕರಣ ಆದಾಗ ಎಂಎಲ್ ಸಿ ಉಮಾಶ್ರೀ ಸಹ ಬೆಳಗಾವಿಯಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಪಕ್ಷೇತರ ಎಂಎಲ್ಸಿ ಲಖನ್ ಜಾರಕಿಹೊಳಿ ಬೆಳಗಾವಿ ಜಿಲ್ಲೆ ಪ್ರತಿನಿಧಿಸುತ್ತಾರೆ. ಮೇಯರ್ ಚುನಾವಣೆ ಮತದಾರರ ಪಟ್ಟಿ ಮೇಲೆ ಪಾಲಿಕೆಯಲ್ಲಿ ಕಾಂಗ್ರೆಸ್ ಭವಿಷ್ಯ ನಿಂತಿದೆ.