ಬೆಂಗಳೂರಲ್ಲಿ ಪ್ರಯಾಣ ಮಾಡೋದೇ ದುಬಾರಿ ಆಗ್ಬಿಟ್ಟಿದೆ.. ಬಿಎಂಟಿಸಿ ಬಸ್ ಹತ್ತೋಕೋದ್ರೆ ಅಲ್ಲೂ ರೇಟ್ ಜಾಸ್ತಿ… ಮೆಟ್ರೋ ಏರೋಕೆ ಹೋದ್ರೆ ಅದು ಇನ್ನೂ ದುಬಾರಿ… ಇದ್ರ ಮಧ್ಯೆ ಆಟೋ ಮೀಟರ್ ದರ ಏರಿಕೆಗೂ ಪ್ಲ್ಯಾನ್ ನಡೀತಿದೆ.
ಹೌದು ಕಳೆದ ವರ್ಷವೇ ಆಟೋ ಚಾಲಕ ಸಂಘಟನೆಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ದರ ಏರಿಕೆ ಮಾಡುವಂತೆ ಮನವಿ ಮಾಡಿದ್ದವು. ಈ ದರ ಏರಿಕೆ ಮಾಡುವ ಬಗ್ಗೆ ಚರ್ಚಿಸಲು ಮಾರ್ಚ್12 ರಂದು 11 ಗಂಟೆಗೆ ಇನ್ ಫೆಂಟ್ರಿ ರಸ್ತೆಯಲ್ಲಿರುವ.ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ.
Sugar Control: ನಿಮಗೆ ಗೊತ್ತೆ..? ಶುಗರ್ ಲೆವೆಲ್ ಕಂಟ್ರೋಲ್ʼನಲ್ಲಿಡುತ್ತಂತೆ ಕರಿಬೇವಿನ ಎಲೆಗಳು!
ಟ್ರಾಫಿಕ್ ಈಸ್ಟ್ ಡಿಸಿಪಿ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಎಷ್ಟು ಏರಿಕೆ ಮಾಡಬೇಕೆಂಬ ಮಾತು ನಡೆಯಲಿದೆ. ಒಂದು ಕಿ.ಮೀಗೆ 5 ರುಪಾಯಿ, ಎರಡು ಕಿಮೀಗೆ 10 ರುಪಾಯಿ ಏರಿಕೆ ಮಾಡುವಂತೆ ಆಟೋ ಸಂಘಟನೆಗಳು ಮನವಿ ಮಾಡಲಾಗಿದೆ. ಬೆಂಗಳೂರಲ್ಲಿ ಮಿನಿಮಮ್ ಆಟೋ ಮೀಟರ್ ದರ ಎರಡು ಕಿಮೀ ಗೆ 30 ರುಪಾಯಿ ಇದೆ. ಈ ಮಿನಿಮಮ್ ದರವನ್ನು 40 ರೂಪಾಯಿಗೆ ಏರಿಕೆ ಮಾಡುವಂತೆ ಮನವಿ ಮಾಡಿವೆ.
2021ರಲ್ಲಿ ಆಟೋ ಮೀಟರ್ ದರ ಹೆಚ್ಚಳ ಮಾಡಲಾಗಿತ್ತು.ಇತ್ತ ಆಟೋ ಸಿಎನ್ಜಿ ಒಂದು ಕೆಜಿಗೆ 88 ರುಪಾಯಿ ಆಗಿದೆ. ಇನ್ನು ಎಲ್ಪಿಜಿ ಕೆಜಿ 61 ರುಪಾಯಿ ಆಗಿದೆ. ಹಾಗಾಗಿ ಮೀಟರ್ ದರ ಏರಿಕೆ ಮಾಡಲೇಬೇಕೆಂದು ಆಟೋ ಚಾಲಕರು ಪಟ್ಟು ಹಿಡಿದಿದ್ದು, ಮಾ. 12 ರಂದು ನಡೆಯಲಿರುವ ಸಭೆಯಲ್ಲಿ ದರ ಏರಿಕೆ ಬಗ್ಗೆ ಅಂತಿಮ ತೀರ್ಮಾನವಾಗಲಿದೆ.