ತಮಿಳುನಾಡಿನ ಡಿಎಂಕೆ ನಾಯಕ ಜಾಕಿರ್ ಹುಸೇನ್ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಹಿಂದಿ ವಿರುದ್ಧ ಪ್ರಮಾಣ ವಚನ ಸ್ವೀಕರಿಸುವಾಗ ಕೌನ್ಸಿಲರ್ ಮಹಿಳೆಯ ಬಳೆಯನ್ನು ತೆಗೆಯುತ್ತಿರುವುದು ಕಂಡುಬಂದಿದೆ. ವರದಿಗಳ ಪ್ರಕಾರ, ಈ ಘಟನೆ ಕೂನೂರಿನಲ್ಲಿ ನಡೆದಿದೆ.
https://x.com/annamalai_k/status/1896896815590760676?ref_src=twsrc%5Etfw%7Ctwcamp%5Etweetembed%7Ctwterm%5E1896896815590760676%7Ctwgr%5Eba71af6d62cf01c2408e984bce767bbb0a94ff94%7Ctwcon%5Es1_&ref_url=https%3A%2F%2Fpublictv.in%2Fdmk-councillor-zakir-hussain-caught-on-camera-trying-to-steal-bangle-during-anti-hindi-pledge%2F
ಹೌದು ಹಿಂದಿ ಹೇರಿಕೆ ಖಂಡಿಸಿ ನಡೆಸಲಾದ ಪ್ರತಿಭಟನೆಯಲ್ಲಿ ಡಿಎಂಕೆ ಕೌನ್ಸಿಲರ್ ಜಾಕೀರ್ ಹುಸೇನ್ ತಮ್ಮ ಪಕ್ಕ ನಿಂತಿದ್ದ ಮಹಿಳೆಯ ಕೈ ಬಳೆ ಎಳೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಇಟ್ಟುಕೊಂಡು ಬಿಜೆಪಿ ಡಿಎಂಕೆ ವಿರುದ್ಧ ಕಿಡಿಕಾರಿದೆ. ಹಿಂದಿ ವಿರೋಧಿ ಪ್ರತಿಜ್ಞೆ ಹೆಸರಲ್ಲಿ ಬಳೆ ಕಳ್ಳತನಕ್ಕೆ ಇಳಿದಿದ್ದಾರೆ..ಕಳ್ಳರಿಗೂ ಡಿಎಂಕೆಗೂ ವ್ಯತ್ಯಾಸವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಟೀಕಿಸಿದ್ದಾರೆ.