ಬಾಗಲಕೋಟೆ : ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸಾಲ ವಸೂಲಿಗೆ ಬಂದ ವೇಳೆ ಮಾರಾಮಾರಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಅಡಿಹುಡಿ ಗ್ರಾಮದಲ್ಲಿ ಫೈನಾನ್ಸ್ ಸಿಬ್ಬಂದಿ ಮೌಲಾಸಾಬ್ ಸನದಿ ಹಾಗೂ ಸಾಲ ಮಾಡಿದ ವ್ಯಕ್ತಿ ಶರೀಫ್ ಸಾಬ ಮಧ್ಯೆ ಮಾರಾಮಾರಿ ನಡೆದಿದೆ.
ಹೈನುಗಾರಿಕೆಗಾಗಿ 80 ಸಾವಿರ ಸಾಲ ಪಡೆಯಾಲಾಗಿದ್ದು, ಒಂದು ತಿಂಗಳ ಕಂತು ಬಾಕಿ ಉಳಿದಿತ್ತು. ಮುಧೋಳ ಮೂಲದ ಐಫೈನಾನ್ಸ್ ಕಂಪನಿ ಬ್ರ್ಯಾಂಚ್ ಮ್ಯಾನೇಜರ್ ಮೌಲಾಸಾಬ್ ವಸೂಲಿಗೆ ಬಂದಿದ್ದರು. ಈ ವೇಳೆ ಶರೀಫ ಸಾಬ್ ಹಾಗೂ ಮೌಲಾಸಾಬ್ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಮಾರಾಮಾರಿ ನಡೆದಿದೆ. ಷರೀಪ ಸಾಬ್ ತಲೆಗೆ ಗಾಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಳಗಿ ಪೊಲೀಸ್ ಠಾಣೆಯಲ್ಲಿ ಇಬ್ಬರ ಕಡೆಯಿಂದಲೂ ದೂರು ಪ್ರತಿದೂರುಗಳು ದಾಖಲಾಗಿವೆ.