ಗದಗ : ಐದು ತಿಂಗಳ ಬಾಣಂತಿಯ ಕುತ್ತಿಗೆ ಹಿಸುಕಿ ನೇಣುಬಿಗಿದು ಹತ್ಯೆಮಾಡಿರುವ ಆರೋಪ ಕೇಳಿ ಬಂದಿದೆ. ಗದಗ ಜಿಲ್ಲೆಯ ನರಗುಂದ ಪಟ್ಟಣದ ಹಗೆದಕಟ್ಟಿಯಲ್ಲಿ ಘಟನೆ ನಡೆದಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಬಾಣಂತಿ ಪವಿತ್ರಾ (25) ಶವ ಪತ್ತೆಯಾಗಿದೆ. ಆತನ ಪತಿ ಹಾಗೂ ಕುಟುಂಬದ ವಿರುದ್ಧ ಯುವತಿ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಪವಿತ್ರ ತನ್ನ ಬಾಣಂತನ ಮುಗಿಸಿಕೊಂಡು ತವರು ಮನೆಯಿಂದ ಗಂಡನ ಮನೆಗೆ ಬಂದ ಮೂರೇ ದಿನದಲ್ಲಿ ಆಕೆಯ ಸಾವಾಗಿದೆ.
Soujanya Rape case: ಯುಟ್ಯೂಬ್ ವಿಡಿಯೋ ವೈರಲ್ ಬೆನ್ನಲ್ಲೇ SPಗಳಿಗೆ ADGP ಎಚ್ಚರಿಕೆ.!
ವರದಕ್ಷಿಣೆ ಹಣ ತರುವಂತೆ ನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿರುವ ಪೋಷಕರು, ಯೋಧ ಹರೀಶ್ ಕಲ್ಲಕುಟಿಕರ್, ಮಾವ ಮೂಕಪ್ಪ, ಅತ್ತೆ ಸೋಮವ್ವ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ನಿನ್ನೆ ಸಂಜೆ ಮನೆಯಲ್ಲಿ ಪವಿತ್ರಾ ಮೇಲೆ ಹಲ್ಲೆ ಮಾಡಿ ನೇಣು ಬಿಗಿದಿದ್ದಾರೆ. ಅಲ್ಲದೇ ವರದಕ್ಷಿಣೆ ಕಿರುಕುಳ ಹಿನ್ನೆಲೆ ಕೊಲೆ ಮಾಡಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ. ಈ ಸಂಬಂಧ ನರಗುಂದ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.