ಬೀದರ್ : ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಲಬುರಗಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಇಲಾಖೆಯ ಮುಖ್ಯ ಯೋಜನಾಧಿಕಾರಿ ಜಗನ್ನಾಥ ಹಾಲಿಂಗೆ ಮನೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದ್ದು, ಬೀದರ್ನಲ್ಲೂ ಕೂಡ ದಾಳಿ ನಡೆದಿದೆ.
ಕಪ್ಪತಗುಡ್ಡದಲ್ಲಿ ಅಗ್ನಿ ಅವಘಡ ; ಅಪಾರ ಪ್ರಮಾಣದ ಹುಲ್ಲುಗಾವಲು ಬೆಂಕಿಗಾಹುತಿ
ಬೀದರನಲ್ಲೂ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳ ತಂಡ ದಿಂದ ದಾಳಿ ನಡೆಸಿದೆ. ಬಸವಕಲ್ಯಾಣ ತಾಲೂಕಿನ ಧನ್ಮೂರಾ ಕೆ ಗ್ರಾಮದಲ್ಲಿ ಇರುವ ಜಗನ್ನಾಥ ಹಾಲಿಂಗೆ ಅವರ ಫಾರ್ಮ್ ಹೌಸ್ ಹಾಗೂ ಭಾಲ್ಕಿ ತಾಲೂಕಿನ ನೀಲಮನಹಳ್ಳಿ ಗ್ರಾಮದಲ್ಲಿ ನ ಫಾರ್ಮ್ ಹೌಸ್ ಹಾಗೂ ಬೀದರ್ ನಗರದ ಶಿವು ನಗರದಲ್ಲಿರುವ ಅವರ ಸಹೋದರಾದ ನಾಗನಾಥ ಹಾಲಿಂಗೆ ಮನೆಯ ಮೇಲೂ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.