ಗದಗ : ಕಪ್ಪತಗುಡ್ಡದಲ್ಲಿ ಮತ್ತೆ ಅಗ್ನಿ ಅವಘಡ ಸಂಭವಿಸಿದೆ. ಕಪ್ಪತಗುಡ್ಡದ ಒಂದು ಅಂಚಿನ ಗುಡ್ಡಕ್ಕೆ ಬೆಂಕಿ ಬಿದಿದ್ದು, ಆ ಭಾಗ ಪೂರ್ತಿ ಸುಟ್ಟು ಕರಕಲಾಗಿದೆ. ಗದಗ ತಾಲೂಕಿನ ಅಸುಂಡಿ ಗ್ರಾಮದ ಬಳಿ ಘಟನೆ ನಡೆದಿದೆ.
ಗ್ರಾಮದ ಜನತಾ ಪ್ಲಾಟ್ ಗೆ ಹೊಂದಿಕೊಂಡೇ ಇರೋ ಗುಡ್ಡದ ಭಾಗದಲ್ಲಿ ಬೆಂಕಿ ಬಿದ್ದಿದ್ದು, ಅಪಾರ ಪ್ರಮಾಣದ ಹುಲ್ಲು ಹಾಗೂ ಸಣ್ಣ ಸಸ್ಯಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿವೆ. ಬೆಂಕಿಯಿಂದಾಗಿ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ಅರಣ್ಯ ಇಲಾಖೆ ತತಕ್ಷಣಕ್ಕೆ ಎಚ್ಚೆತ್ತಿದ್ದು,ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.