ಹುಬ್ಬಳ್ಳಿ: ಡಿಸೇಲ್ ತುಂಬಿದ ಲಾರಿಗೆ ಟ್ರಕ್ ವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿರುವ ಪರಿಣಾಮ, ಡಿಸೇಲ್ ಟ್ಯಾಂಕ್ ಕಟ್ಟ ಆಗಿ ಡಿಸೇಲ್ ಪೊಲು ಆಗಿತ್ತಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ.
ನವಲಗುಂದ ಕಡೆಯಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಡಿಸೇಲ್ ಟ್ಯಾಂಕರ್ ಗೆ ಹಿಂಬದಿಯಿಂದ ಟ್ರಕ್ ಗುದ್ದಿದೆ. ಇನ್ನು ಘಟನೆಯಲ್ಲಿ ಟ್ರಕ್ ಡ್ರೈವರ್ ಟ್ರಕ್ನಲ್ಲಿ ಸಿಲುಕಿದ್ದು ಸ್ಥಳೀಯರ ಸಹಾಯದಿಂದ ಹೊರ ತೆಗೆಯುವ ಪ್ರಯತ್ನ ನಡೆದಿದೆ. ಡಿಸೇಲ್ ಟ್ಯಾಂಕ್ ಲೀಕ್ ಆಗಿರುವ ಪರಿಣಾಮ ಗ್ರಾಮದ ಕೆಲವರು ಡಿಸೇಲ್ ಬಾಟಲ್ ನಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮೀಣ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.