ಫ್ಲೋರಿಡಾದ ಪಾಮ್ಸ್ ವೆಸ್ಟ್ ಆಸ್ಪತ್ರೆಯಲ್ಲಿ 67 ವರ್ಷದ ಭಾರತೀಯ ಮೂಲದ ನರ್ಸ್ ಲೀಲಮ್ಮ ಲಾಲ್ ಅವರ ಮೇಲೆ ಮನೋವೈದ್ಯಕೀಯ ರೋಗಿಯೊಬ್ಬ ಕ್ರೂರವಾಗಿ ಹಲ್ಲೆ ನಡೆಸಿದ್ದು, ಅವರ ಮುಖದಲ್ಲಿ ತೀವ್ರ ಮುರಿತ ಉಂಟಾಗಿದೆ ಎಂದು ಸ್ಥಳೀಯ ಸುದ್ದಿ ಚಾನೆಲ್ WPBF ವರದಿ ಮಾಡಿದೆ.
ದಾಳಿಯ ಸಮಯದಲ್ಲಿ ಮಾಡಿದ ಜನಾಂಗೀಯ ಹೇಳಿಕೆಗಳಿಂದಾಗಿ ದ್ವೇಷ ಅಪರಾಧ ಹೆಚ್ಚಳದೊಂದಿಗೆ ಎರಡನೇ ಹಂತದ ಕೊಲೆಗೆ ಯತ್ನಿಸಿದ ಆರೋಪ ಹೊರಿಸಿ ಅಧಿಕಾರಿಗಳು 33 ವರ್ಷದ ಸ್ಟೀಫನ್ ಸ್ಕ್ಯಾಂಟಲ್ಬರಿಯನ್ನು ಬಂಧಿಸಿದ್ದಾರೆ.
WPBF ಉಲ್ಲೇಖಿಸಿದ ಬಂಧನ ಅಫಿಡವಿಟ್ನ ಪ್ರಕಾರ, “ಸ್ಕ್ಯಾಂಟಲ್ಬರಿ ಬೇಕರ್ ಕಾಯ್ದೆಯಡಿಯಲ್ಲಿ ಮನೋವೈದ್ಯಕೀಯ ರೋಗಿಯಾಗಿದ್ದರು”, ಅಂದರೆ ಮಾನಸಿಕ ಆರೋಗ್ಯ ಬಿಕ್ಕಟ್ಟಿನ ನಂತರ ಅವರನ್ನು ಅನೈಚ್ಛಿಕವಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಹೆಚ್ಸಿಎ ಫ್ಲೋರಿಡಾ ಪಾಮ್ಸ್ ವೆಸ್ಟ್ ಆಸ್ಪತ್ರೆಯಲ್ಲಿ ಮನೋ ರೋಗಿಯಾಗಿದ್ದ ಸ್ಕ್ಯಾಂಟಲ್ಬರಿ ಮಾ.4 ರಂದು ಲೀಲಮ್ಮ ಮೇಲೆ ಹಲ್ಲೆ ನಡೆಸಿದ್ದ. ಹಲ್ಲೆಗೊಳಗಾದ ಲೀಲಮ್ಮ ಅವರ ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಭುಜದ ಮೂಳೆಗಳು ಮುರಿದಿದ್ದು, ಮೆದುಳಿನಲ್ಲಿ ರಕ್ತಸ್ರಾವವಾಗಿದೆ. 2 ನಿಮಿಷಗಳವರೆಗೆ ನಡೆದ ಹಲ್ಲೆಯ ದೃಶ್ಯ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪರಿಶೀಲನೆ ಮಾಡುತ್ತಿದ್ದೇವೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಯ ಬಗ್ಗೆ ಲೀಲಮ್ಮ ಅವರ ಮಗಳು ಸಿಂಡಿ ಜೋಸೆಫ್ ಪ್ರತಿಕ್ರಿಯಿಸಿ. ಹಲ್ಲೆ ತೀವ್ರತೆಗೆ ಅಮ್ಮನ ಮೆದುಳಿನಲ್ಲಿ ರಕ್ತಸ್ರಾವವಾಗಿದೆ. ಆಕೆಯ ಮುಖದ ಬಲಭಾಗಕ್ಕೆ ಗಂಭೀರ ಗಾಯಗಳಾಗಿವೆ. ಕಣ್ಣಿನ ಭಾಗಕ್ಕೂ ಬಲವಾಗಿ ಪೆಟ್ಟು ಬಿದ್ದಿದ್ದು, ಕಣ್ಣುಗಳು ಊದಿಕೊಂಡಿದೆ. ಮೊದಲು ನನಗೆ ಆಕೆಯನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಕಣ್ಣೀರು ಹಾಕಿದರು.
ಹಲ್ಲೆಯ ಬಳಿಕ ಆರೋಪಿ ಸ್ಕ್ಯಾಂಟಲ್ಬರಿ `ಭಾರತೀಯರು ಕೆಟ್ಟವರು’ ಮತ್ತು `ನಾನು ಭಾರತೀಯ ವೈದ್ಯರ ಬಗ್ಗೆ ವಿವರವಾಗಿ ಹೇಳಿದ್ದೇನೆ’ ಎಂದು ಹೇಳಿಕೆ ನೀಡಿದ್ದಾನೆ. ಈ ಹೇಳಿಕೆ ಕುರಿತು ಆಸ್ಪತ್ರೆಯ ವೈದ್ಯರೊಬ್ಬರು ಪೊಲೀಸರಿಗೆ ಸಾಕ್ಷಿಯನ್ನು ನೀಡಿದ್ದಾರೆ. ಸ್ಕ್ಯಾಂಟಲ್ಬರಿ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಅವರನ್ನು ಮಾನಸಿಕ ಆರೋಗ್ಯ ಚಿಕಿತ್ಸೆಗಾಗಿ ವರ್ಗಾಯಿಸುವಂತೆ ಕೋರಿ ಸ್ಕ್ಯಾಂಟಲ್ಬರಿ ಪತ್ನಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಧೀಶರು ನಿರಾಕರಿಸಿದರು.