ವಿಜಯಪುರ : ವಿಜಯಪುರದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತರು ಕೆಎಚ್ಬಿ ಅಧಿಕಾರಿಗೆ ಶಾಕ್ ನೀಡಿದ್ದಾರೆ. ಆದಾಯ ಮೀರಿ ಆಸ್ತಿ ಹೊಂದಿರೋ ಆರೋಪ ಹಿನ್ನೆಲೆ ಕರ್ನಾಟಕ ಗೃಹ ಮಂಡಳಿ ಎಫ್ ಡಿ ಎ ಶಿವಾನಂದ ಕೆಂಬಾವಿ ನಿವಾಸ ಹಾಗೂ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ.
ವಿಜಯಪುರ ನಗರದ ಸುಕೂನ್ ಕಾಲೋನಿಯಲ್ಲಿರೋ ಶಿವಾನಂದ ಕೆಂಬಾವಿ ಅವರ ನಿವಾಸ ಮತ್ತು ತಿಡಗುಂದಿ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ಡಿ ಮಲ್ಲೇಶ ನೇತೃತ್ವದಲ್ಲಿ ಡಿವೈಎಸ್ಪಿ ಸುರೇಶ ರೆಡ್ಡಿ, ಸಿಪಿಐ ಆನಂದ ಟಕ್ಕಣ್ಣನವರ, ಸಿಬ್ಬಂದಿಗಳು ರೇಡ್ ನಡೆಸಿದ್ದು, ಕಡತಗಳ ಪರಿಶೀಲಿಸುತ್ತಿದ್ದಾರೆ.