ಧರ್ಮಸ್ಥಳದ ಸೌಜನ್ಯ ರೇಪ್ & ಮರ್ಡರ್ ಕೇಸ್ ಕುರಿತು ಮತ್ತೆ ಕಿಚ್ಚು ಹೊತ್ತಿಕೊಂಡಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿಯೇ ಎದ್ದಿದ್ದು, ಸೌಜನ್ಯ ರೇಪ್ & ಮರ್ಡರ್ ಕೇಸ್ ಕುರಿತು ಮಾತನಾಡಿದ್ದ ಕನ್ನಡದ ಖ್ಯಾತ ಯುಟ್ಯೂಬರ್ಗೆ ಜೀವ ಭಯ ಕಾಡುತ್ತಿದೆ. ಈ ಬಗ್ಗೆ ಖುದ್ದು ಯುಟ್ಯೂಬರ್ ಗಂಭೀರ ಆರೋಪ ಮಾಡಿದ್ದು, ಕರ್ನಾಟಕದಲ್ಲಿ ಹೊಸ ತಲ್ಲಣ ಸೃಷ್ಟಿಯಾಗಿದೆ.
ಪ್ರಯಾಣಿಕರಿಗೆ ಬಿಗ್ ಶಾಕ್: ಬೆಂಗಳೂರಿನಲ್ಲಿ ಆಟೋ ಮೀಟರ್ ದರ ಏರಿಕೆಗೆ ಮುಹೂರ್ತ ಫಿಕ್ಸ್ !
ಕನ್ನಡ ಯೂಟ್ಯೂಬ್ ಜಗತ್ತಿನಲ್ಲೊಂದು ಸಂಚಲನ ಸೃಷ್ಟಿಯಾಗಿದೆ. ಈವರೆಗೆ ಇಂಗ್ಲೀಷ್ , ಹಿಂದಿ ಯೂಟ್ಯೂಬ್ ಚಾನಲ್ ಗಳಲ್ಲಿ ಮಾತ್ರ ಕಾಣಲು ಸಿಗುತ್ತಿದ್ದ ಕೋಟಿಗಟ್ಟಲೆ ವೀಕ್ಷಣೆ, ಲಕ್ಷಗಟ್ಟಲೆ ಲೈಕ್ಸ್, ಸಾವಿರ ಸಾವಿರ ಕಮೆಂಟುಗಳು ಕನ್ನಡ ಯೂಟ್ಯೂಬ್ ಚಾನಲ್ ಒಂದರ ವಿಡಿಯೋಗೆ ಸಿಕ್ಕಿವೆ.
ಆದರೆ ಈ ಭಾರೀ ಸಾಧನೆ ಮಾಡಿರುವ ಯೂಟ್ಯೂಬರ್ ಗೆ ಈಗ ದಾಖಲೆಗಳ ಜೊತೆ ಸಂಕಷ್ಟ, ಸವಾಲುಗಳೂ ಎದುರಾಗಿವೆ. ಬೆದರಿಕೆ, ಅವಹೇಳನ, ಆರೋಪಗಳ ಸುರಿಮಳೆಯಾಗಿದೆ.
ಹೌದು, ದಶಕದ ಹಿಂದೆ ನಡೆದಿದ್ದ ಸೌಜನ್ಯಾ ರೇಪ್ ಅಂಡ್ ಮರ್ಡರ್ ಕೇಸ್ ಕುರಿತು ಸಮೀರ್ ವಿಡಿಯೊ ಮಾಡಿದ್ದಾರೆ. ಈ ವಿಡಿಯೊದಲ್ಲಿ ಸೌಜನ್ಯಾ ಕೊಲೆಯ ಕುರಿತು ವಿವರಿಸಿರುವ ಸಮೀರ್ ಪ್ರಕರಣದಲ್ಲಿ ಎಲ್ಲೆಲ್ಲಿ ಸಾಕ್ಷ್ಯ ನಾಶವಾಯಿತು ಹಾಗೂ ನಿರಪರಾಧಿಯನ್ನು ಹೇಗೆ ಸಿಕ್ಕಿಹಾಕಿಸಲಾಯಿತು ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ಇನ್ನು ಇದೇ ವಿಡಿಯೊದ ಆರಂಭದಲ್ಲಿ ಧರ್ಮಸ್ಥಳ ದೇವಾಲಯ ಒಂದು ಜೈನ್ ದೇವಾಲಯ ಎಂಬುದನ್ನು ಅದರ ಮಾಲೀಕರೇ ಸರ್ಕಾರಕ್ಕೆ ತಿಳಿಸಿದ್ದಾರೆ ಎಂದು ಸಾಕ್ಷಿಯನ್ನೂ ಸಹ ಬಿಚ್ಚಿಟ್ಟಿದ್ದರು ಸಮೀರ್.
ಹೀಗೆ ಸಮೀರ್ ವಿಡಿಯೊ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊಗಳ ಕೆಲ ತುಣುಕುಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಹೀಗೆ ವೈರಲ್ ಆದ ಬೆನ್ನಲ್ಲೇ ಸಮೀರ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಂಚಿಕೊಂಡಿದ್ದು, ತನಗೆ ಯಾವಾಗ ಏನು ಬೇಕಾದರೂ ಆಗಬಹುದು ಎಂದು ಹೇಳಿಕೊಂಡಿದ್ದಾರೆ.
ತಾವೇ ಮಾತನಾಡಿರುವ ವಿಡಿಯೊ ಹಂಚಿಕೊಂಡಿರುವ ಸಮೀರ್ ಮೊದಲಿಗೆ ‘ನ್ಯಾಯ ಕೇಳೋದ್ರಲ್ಲೂನೂ ಜಾತಿ – ಧರ್ಮ ಎಲ್ಲಿಂದ ಬಂತೋ ನನಗೆ ಗೊತ್ತಿಲ್ಲ’ ಎಂದು ಬೇಸರ ಹೊರಹಾಕಿದ್ದಾರೆ. ಅಲ್ಲದೇ ಮತ್ತೊಂದು ಸ್ಟೋರಿಯಲ್ಲಿ ‘ನನ್ನ ಮನೆ ಅಡ್ರೆಸ್ ಲೀಕ್ ಮಾಡಿರೋರಿಗೆ, ನನ್ನ ಫೋನ್ ನಂಬರ್ ಲೀಕ್ ಮಾಡಿರೋರಿಗೆ ನನ್ನ ಹುಡುಕೊಂಡು ಬಂದು ಹೊಡಿಯೋದು ಕಷ್ಟ ಆಗಲ್ಲ. ಹೀಗಾಗಿ ಕನ್ನಡ ಯುಟ್ಯೂಬ್ ಕಮ್ಯೂನಿಟಿಯಲ್ಲಿ ಕೈ ಮುಗಿದು ಕೇಳಿಕೊಳ್ತೀನಿ ಈ ವಿಷಯವಾಗಿ ನಿಮ್ಮ ದನಿ ಎತ್ತಿ’ ಎಂದು ಸಮೀರ್ ಹೇಳಿದ್ದಾರೆ