ಒಂದು ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿ, ದುಷ್ಟಶಕ್ತಿಗಳ ಪ್ರಭಾವ ಹೆಚ್ಚಿ ಮನೆಯ ಮೇಲೆ ಪ್ರಭಾವ ಬೀರುತ್ತಿದ್ದರೆ, ಅದರಲ್ಲೂ ಹೆಚ್ಚಾಗಿ ಮಕ್ಕಳ ಮೇಲೆ ಪ್ರಭಾವ ಬೀರುತ್ತಿದ್ದರೆ ಕೇವಲ ಒಂದೇ 1 ರೂ. ನಾಣ್ಯದಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
ಅನೇಕರು ವಾಸ್ತು ಶಾಸ್ತ್ರದ ಪ್ರಕಾರವೇ ಮನೆ ನಿರ್ಮಿಸಿಕೊಳ್ಳುತ್ತಾರೆ. ಆದ್ದರಿಂದ, ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇಡಲಾದ ಪ್ರತಿಯೊಂದು ವಸ್ತುವು ಮನೆಯಲ್ಲಿರುವ ಕುಟುಂಬ ಸದಸ್ಯರ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ವಾಸ್ತು ಶಾಸ್ತ್ರವು ಅನೇಕ ಸಮಸ್ಯೆಗಳಿಗೆ ತಕ್ಷಣ ಪರಿಹಾರಗಳನ್ನು ನೀಡುತ್ತದೆ. ಅದರಂತೆ, ದಿಂಬಿನ ಕೆಳಗೆ ಕೆಲವು ವಸ್ತುಗಳನ್ನು ಇಡುವುದರಿಂದ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮ ಸುಧಾರಿಸುತ್ತದೆ ಎಂಬ ನಂಬಿಕೆ. ಹಾಗಿದ್ರೆ ಆ ವಸ್ತುಗಳು ಯಾವುವು ಎಂದು ಇಲ್ಲಿದೆ ಓದಿ.
ಹೂವುಗಳು: ಹೂವುಗಳನ್ನು ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮ, ಪೂಜೆ, ತಲೆಗೆ ಮುಡಿಯಲೆಂದು ಹೆಚ್ಚಿನವರು ಖರೀದಿಸುತ್ತಾರೆ. ಇನ್ನೂ ಸೀಸನ್ ಟೈಮಲ್ಲಿ ಈ ಹೂಗಳಿಗೆ ಮಾರ್ಕೆಟ್ನಲ್ಲಿ ಭಾರೀ ಡಿಮ್ಯಾಂಡ್. ಇನ್ನು ತಜ್ಞರು ಹೇಳುವಂತೆ ವಾಸ್ತು ಪ್ರಕಾರ, ಮಲಗುವ ಮುನ್ನ ನಿಮ್ಮ ದಿಂಬಿನ ಕೆಳಗೆ ಪರಿಮಳಯುಕ್ತ ಹೂವುಗಳನ್ನು ಇಡುವುದರಿಂದ ಮನಸ್ಸು ಶಾಂತವಾಗುತ್ತದೆ ಮತ್ತು ಒತ್ತಡ ಕಡಿಮೆಯಾಗುತ್ತದೆ. ಇದು ದಾಂಪತ್ಯ ಜೀವನವನ್ನು ಸಂತೋಷಕರವಾಗಿಸುತ್ತದೆ ಎಂದು ಹೇಳಲಾಗಿದೆ
ನಾಣ್ಯ: ಹಣ ಯಾರಿಗೆ ಬೇಡ ಹೇಳಿ. ಇಂದು ಹಣ ಇಲ್ಲದೆ ಜೀವನವೇ ಶೂನ್ಯ ಎಂಬಂತಾಗಿದೆ. ಇನ್ನು ಮಲಗುವಾಗ ದಿಂಬಿನ ಕೆಳಗೆ ನಾಣ್ಯ ಇಟ್ಟುಕೊಳ್ಳುವುದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಆದರೆ ಈ ನಾಣ್ಯವನ್ನು ಪೂರ್ವ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು ಎನ್ನಲಾಗಿದೆ
ಬೆಳ್ಳುಳ್ಳಿ: ದಿಂಬಿನ ಕೆಳಗೆ ಬೆಳ್ಳುಳ್ಳಿ ಇಟ್ಟುಕೊಂಡು ಮಲಗುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ ಎನ್ನಲಾಗಿದೆ. ಅಲ್ಲದೆ ಇದರಿಂದ ಉತ್ತಮ ನಿದ್ರೆಯೂ ಬರುವಂತೆ ಮಾಡುತ್ತದೆ. ಕೆಲವರಿಗೆ ಆಗಾಗ ಕೆಟ್ಟ ಕನಸುಗಳು ಬೀಳುತ್ತಿರುತ್ತದೆ, ಆದ್ರೆ ಮಲಗುವ ಮುನ್ನ ನಿಮ್ಮ ತಲೆದಿಂಬು ಅಡಿಯಲ್ಲಿ ಬೆಳ್ಳುಳ್ಳಿ ಇಟ್ಟರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಂತೆ.
ಹಸಿರು ಏಲಕ್ಕಿ: ದಿಂಬಿನ ಕೆಳಗೆ ಹಸಿರು ಏಲಕ್ಕಿ ಅಥವಾ ಹಸಿರು ಮೆಣಸಿನಕಾಯಿಗಳನ್ನು ಇಡುವುದರಿಂದ ಉತ್ತಮ ನಿದ್ರೆ ಬರುತ್ತದೆ ಎಂದು ಹೇಳಲಾಗಿದೆ ಮತ್ತು ಇದರಿಂದ ಒತ್ತಡವೂ ಕಡಿಮೆಯಾಗುತ್ತದೆ.
ಸೋಂಪು: ಮಲಗುವಾಗ ದಿಂಬಿನ ಕೆಳಗೆ ಸೋಂಪು ಇಡುವುದರಿಂದ ರಾಹು ದೋಷ ನಿವಾರಣೆಯಾಗುತ್ತದೆ ಮತ್ತು ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.
ಚಾಕು: ನಿದ್ದೆ ಮಾಡುವಾಗ ಭಯಾನಕ ಕನಸುಗಳನ್ನು ಕಂಡರೆ ತಕ್ಷಣ ಕೆಲವರು ಬೆಚ್ಚಿಬೀಳುತ್ತಾರೆ. ಅಂಥವರು ನಿದ್ದೆ ಮಾಡುವಾಗ ನಿಮ್ಮ ದಿಂಬಿನ ಕೆಳಗೆ ಒಂದು ಚಾಕುವನ್ನು ಇಟ್ಟುಕೊಳ್ಳಬೇಕು. ಇದು ಅಂತಹ ಕನಸುಗಳು ಬರದಂತೆ ತಡೆಯುತ್ತದೆ.
ನೀರಿನ ಪಾತ್ರೆ: ರಾತ್ರಿ ಮಲಗುವ ಮುನ್ನ ನೀರಿನ ಪಾತ್ರೆಯನ್ನು ಸ್ಟೂಲ್ ಮೇಲೆ ಅಥವಾ ದಿಂಬಿನ ಬಳಿ ನೆಲದ ಮೇಲೆ ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಹೆಚ್ಚಿನವರಿಗೆ ಮಧ್ಯರಾತ್ರಿ ಎದ್ದು ನೀರು ಕುಡಿಯುವ ಅಭ್ಯಾಸವಿರುತ್ತದೆ. ಅಂಥವರಿಗೂ ಇದು ತುಂಬಾ ಸಹಕಾರಿಯಾಗಲಿದೆ.