ಶ್ರೀನಿವಾಸಪುರ – ಮಾಜಿ ಸ್ಪೀಕರ್ ರಮೇಶ್ ಕುಮಾರ್ರಿಂದ ಅರಣ್ಯ ಭೂಮಿ ಒತ್ತುವರಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಶಿವಾರೆಡ್ಡಿ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥ ಪಡಿಸಿದೆ. ಈಗಾಗಲೇ ಸರ್ವೆ ವರದಿ ಸಲ್ಲಿಕೆಯಾಗಿರುವ ಹಿನ್ನೆಲೆ ರಿಟ್ ಅರ್ಜಿರನ್ನು ವಜಾ ಮಾಡಲಾಗಿದೆ. ವರದಿ ಪ್ರಶ್ನಿಸಲು ರಮೇಶ್ ಕುಮಾರ್ರಿಗೆ ಹೈಕೋರ್ಟ್ ಅವಕಾಶ ನೀಡಿದೆ. ಇನ್ನು ಈ ವಿಚಾರವಾಗಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಕುಮಾರ್, ಇಷ್ಟು ದಿವಸ ಬಂದಿದ್ದು ರೀಲ್ ಹಾಗೂ ಟ್ರಯಲ್ ಅಷ್ಟೇ. ಸೋಮವಾರದಿಂದ ಸಿನಿಮಾ ಶುರುವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದ್ದಾರೆ.
ಚೌಡೇಶ್ವರಮ್ಮ ಪಾದದ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ನಾನು ತಪ್ಪು ಮಾಡಿಲ್ಲ. ಒಂದೇ ಒಂದು ಗುಂಟೆ ಜಾಗ ಬೇಡ. ಸ್ವಾಮಿದು ಜಮೀನು, ತೋಟ ಹೋಗುತ್ತೆಂದು ಹೇಳ್ತಿದ್ದಾರೆ. ಎರಡು ಮೂರು ತಿಂಗಳಿಂದ ಹೇಳುತ್ತಿದ್ದಾರೆ, ಏನೂ ಹೋಗಲ್ಲ. ಇದನ್ನು 2002ರಲ್ಲೇ ನಾನೇ ಸರ್ಕಾರಕ್ಕೆ ಬರೆದುಕೊಟ್ಟಿದ್ದೇನೆ. ಆದರೆ ಇದೆಲ್ಲವನ್ನು ಮುಚ್ಚಿಟ್ಟಿದ್ದಾರೆ, ಈ ಬಗ್ಗೆ ನಾನು ಇದುವರೆಗೂ ಉತ್ತರ ಕೊಟ್ಟಿಲ್ಲ ಎಂದು ಹೇಳಿದ್ದಾರೆ. 4 ಸರ್ವೆ ಆಗಿದೆ, ಎಲ್ಲದರಲ್ಲೂ ನಿರ್ದೋಷಿ ಅಂತ ಬಂದಿದೆ. ಎಲ್ಲದರಲ್ಲೂ ರಮೇಶ್ ಕುಮಾರ್ ನಿರ್ದೋಷಿ ಅಂತ ಇದೆ. ನಾನು ಸರ್ಕಾರಿ ಭೂಮಿ, ಅರಣ್ಯ ಭೂಮಿ ಒತ್ತುವರಿ ಮಾಡಿಲ್ಲ. ಅರ್ಜಿದಾರರಿಗೆ ಆ ದೇವರು ಒಳ್ಳೇದು ಮಾಡಲಿ ಎಂದಿದ್ದಾರೆ.