ಬೆಂಗಳೂರು:- ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಮರು ಜಾರಿಗೆ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಕಲಾಪದಲ್ಲಿ ಚರ್ಚಿಸಿದ ಅವರು, ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಮರು ಜಾರಿ ಮಾಡಬೇಕು. ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಮತ್ತೆ ಜಾರಿ ಮಾಡಬೇಕು. ಕೇಂದ್ರ ಸರ್ಕಾರದ ಸಹಯೋಗದಲ್ಲಿ ಯೋಜನೆಯಡಿ 1 ಲಕ್ಷ ರೂ.ನಲ್ಲಿ 20 ಕುರಿ ಅಥವಾ ಮೇಕೆ ತೆಗೆದುಕೊಳ್ಳುವ ಯೋಜನೆ ಇದಾಗಿದೆ. 20 ಕುರಿ, ಮೇಕೆಗೆ ಹಣ ಕೊಡಲು ಆಗದೇ ಹೋದರೆ 10 ಕುರಿ ಅಥವಾ ಮೇಕೆಗೆ ಆದರೂ ರಾಜ್ಯ ಸರ್ಕಾರವೇ ಹಣ ಕೊಟ್ಟು ಯೋಜನೆ ಪ್ರಾರಂಭ ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸಚಿವ ವೆಂಕಟೇಶ್ ಪ್ರತಿಕ್ರಿಯಿಸಿ, ಅಮೃತ ಸ್ವಾಭಿಮಾನಿ ಕುರಿಗಾಯಿ ಯೋಜನೆಯಲ್ಲಿ ಫಲಾನುಭವಿಗಳು ಹಣ ಮರುಪಾವತಿ ಮಾಡಿರಲಿಲ್ಲ. ಹೀಗಾಗಿ ಆರ್ಥಿಕ ಇಲಾಖೆ ಯೋಜನೆ ಸ್ಥಗಿತ ಮಾಡಲು ಸೂಚನೆ ಕೊಟ್ಟಿತ್ತು. ಹೀಗಾಗಿ ಯೋಜನೆ ರದ್ದು ಮಾಡಿದ್ದೇವೆ. ಯೋಜನೆ ಮತ್ತೆ ಪ್ರಾರಂಭ ಮಾಡಲು ಸಿಎಂ ಅವರಿಗೆ ಮನವಿ ಮಾಡಿದ್ದೇವೆ. ಸಿಎಂ ಒಪ್ಪಿಗೆ ಕೊಟ್ಟರೆ ಯೋಜನೆ ಮತ್ತೆ ಪ್ರಾರಂಭ ಮಾಡುತ್ತೇವೆ ಎಂದು ಭರವಸೆ ನೀಡಿದರು.