ಬೆಂಗಳೂರು: ವೀರಶೈವ ಲಿಂಗಾಯತರಿಗೆ 2ಎ ಮೀಸಲಾತಿ ತಪ್ಪಿಸಿರೋದು ಯಡಿಯೂರಪ್ಪ ಮತ್ತು ವಿಜಯೇಂದ್ರ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತರಿಗೆ 2 ಎ ಮೀಸಲಾತಿ ತಪ್ಪಿಸಿದ್ದೇ ಯಡಿಯೂರಪ್ಪ ಮತ್ತು ವಿಜಯೇಂದ್ರ, ಅವರ ನಾಯಕತ್ವವನ್ನು ವೀರಶೈವ ಲಿಂಗಾಯತ ಸಮುದಾಯ ಒಪ್ಪುವುದು ಸಾಧ್ಯವೇ ಇಲ್ಲ ಎಂದು ಹೇಳಿದರು.
ಎಚ್ಚರ.. ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದೆಯೇ..? ಹಾಗಿದ್ರೆ ಈ ತಪ್ಪು ಮಾಡಿದ್ರೆ 10 ಸಾವಿರ ರೂ. ದಂಡ..!
ಇನ್ನೂ ಸರ್ಕಾರ ಮುಸಲ್ಮಾನರಿಗೆ ಮೀಸಲಾತಿಯನ್ನು ಘೋಷಿಸಿದರೆ ಅದು ಸಂವಿಧಾನ ವಿರೋಧಿ ಅನಿಸಿಕೊಳ್ಳಲಿದೆ, ಯಾಕೆಂದರೆ, ಧರ್ಮಾಧರಿತ ಮೀಸಲಾತಿಯನ್ನು ನೀಡಲು ಬರೋದಿಲ್ಲ, ಸರ್ವೋಚ್ಛ ನ್ಯಾಯಾಲಯದಲ್ಲಿ ಇದರ ಬಗ್ಗೆ ವಾದವಿವಾದ ನಡೆದಿದೆ, ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸಲ್ಮಾನರಿಗೆ ಮೀಸಲಾತಿ ಸಲ್ಲದು ಎಂಬ ತೀರ್ಪು ನ್ಯಾಯಾಲಯ ನೀಡುವ ಭರವಸೆ ತಮಗಿದೆ ಎಂದು ಹೇಳಿದರು.