ಬೆಂಗಳೂರು: ರಾಜ್ಯ ರೇಷ್ಮೆ ಸಂಸ್ಥೆಯ ಮಾರ್ಕೆಟಿಂಗ್ ಬೋರ್ಡ್ ಎಂ.ಡಿ ಯಾಗಿ ಡಿ.ರೂಪ ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿದೆ. ಇಂಟರ್ನಲ್ ಸೆಕ್ಯೂರಿಟಿಯಲ್ಲಿ ಡಿವಿಷನ್ ನಲ್ಲಿ ಐಜಿಪಿ ಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ರಾಜ್ಯ ರೇಷ್ಮೆ ಸಂಸ್ಥೆಯ ಮಾರ್ಕೆಟಿಂಗ್ ಬೋರ್ಡ್ ಎಂ.ಡಿ ಯಾಗಿ ವರ್ಗಾವಣೆಯಾಗಿದ್ದಾರೆ.
ಕೆಳಹಂತದ ಸಿಬ್ಬಂದಿಗಳನ್ನು ಬಳಸಿಕೊಂಡು ದಾಖಲೆ ಕಳುವು ಮಾಡಿಸಿದ್ದು, ನನ್ನ ವಿರುದ್ಧ ಷಡ್ಯಂತ್ರ ನಡೆಯುವ ಸಾಧ್ಯತೆ ಇದೆ ಎಂದು ಡಿಐಜಿ ವರ್ತಿಕಾ ಕಟಿಯಾರ್ ಅವರು ರೂಪ ಮೌದ್ಗಿಲ್ ವಿರುದ್ದ ಆರೋಪಿಸಿದ್ದು,
ಎಚ್ಚರ.. ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದೆಯೇ..? ಹಾಗಿದ್ರೆ ಈ ತಪ್ಪು ಮಾಡಿದ್ರೆ 10 ಸಾವಿರ ರೂ. ದಂಡ..!
ಈ ಸಂಬಂಧ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಸರ್ಕಾರ ಮೊನ್ನೆ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆ ಮಾಡಿತ್ತು. ಇದರ ಬೆನ್ನಲ್ಲೇ ದೂರು ನೀಡಿದವರನ್ನೇ ವರ್ಗಾವಣೆ ಮಾಡಲಾಗಿದೆ ಎನ್ನುವ ಚರ್ಚೆಗಳು ಶುರುವಾಗಿದ್ದವು. ಇದೀಗ ರೂಪ ಅವರನ್ನೂ ಸಹ ಸರ್ಕಾರ ವರ್ಗಾವಣೆ ಮಾಡಿದೆ.