ಬೆಂಗಳೂರು: ನನ್ನನ್ನು ಚಲನಚಿತ್ರೋತ್ಸವಕ್ಕೆ ಕರೆದಿಲ್ಲ. ಪಾಸ್ ಕೂಡ ನೀಡಿಲ್ಲ ಎಂದು ಹಿರಿಯ ಹಾಸ್ಯನಟ ಟೆನ್ನಿಸ್ ಕೃಷ್ಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನ್ನನ್ನು ಚಲನಚಿತ್ರೋತ್ಸವಕ್ಕೆ ಕರೆದಿಲ್ಲ. ಪಾಸ್ ಕೂಡ ನೀಡಿಲ್ಲ. ಸಾಧುಕೋಕಿಲ ಅವರನ್ನೇ ಕೇಳಿ ಎಂದು ಹೇಳುತ್ತಾರೆ. ಯಾರ ಹತ್ತಿರ ಪಾಸ್ ಕೊಟ್ಟಿದ್ದಾರೋ ಗೊತ್ತಿಲ್ಲ. ಸಾಧುಕೋಕಿಲ ಅವರು ಸಭೆ ಕರೆಯಬೇಕಿತ್ತು.
Diabetes: ಮಧುಮೇಹಿಗಳು ಬ್ಲಾಕ್ ಕಾಫಿ ಕುಡಿದರೆ ಏನಾಗುತ್ತದೆ..? ತಜ್ಞರು ಹೇಳೋದೇನು ಗೊತ್ತಾ..?
ನಿಗಮಮಂಡಳಿ ಅಧ್ಯಕ್ಷ ಸಭೆ ನಡೆಸಬೇಕಿತ್ತು. ನನ್ನ ಜೊತೆಯೇ ಅವರು ಸರಿಯಾಗಿ ಮಾತನಾಡಲ್ಲ. ಆಹ್ವಾಸ ಸಹ ಕೊಟ್ಟಿಲ್ಲ. ಸಾಧುಕೋಕಿಲ ಫೋನ್ ನಂಬರ್ ನನ್ನ ಬಳಿ ಇಲ್ಲ ಎಂದು ಹೇಳಿದರು. ನಾನು ಸರ್ಕಾರದ ಅನೇಕ ಹೋರಾಟದಲ್ಲಿ ಭಾಗಿಯಾಗಿದ್ದೆ. ಕಾಲು ನೋವಿನ ಕಾರಣದಿಂದ ಮೇಕೆದಾಟು ಹೋರಾಟಕ್ಕೆ ಬರಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.