ಹುಬ್ಬಳ್ಳಿ: ಜೂನಿಯರ್ ರೆಬಲ್ ಸ್ಟಾರ್ ಅಂಬರೀಷ್ ಗಾಗಿ ಕಲಘಟಗಿ ತೊಟ್ಟಿಲು ಸಿದ್ಧವಾಗಿದೆ.ಧಾರವಾಡ ಜಿಲ್ಲೆಯ ಕಲಘಟಗಿಯಿಂದ ಯಂಗ್ ರೆಬಲ್ ಸ್ಟಾರ್ ಅಭಿಷೇಕ ಪುತ್ರನ ನಾಮಕರಣಕ್ಕೆ,ಕಲಘಟಗಿಯ ಚಿತ್ರಗಾರ ಶ್ರೀಧರ್ ಕುಟುಂಬದಿಂದ ಕಳೆದ ಎರಡು ತಿಂಗಳಿಂದ ತೊಟ್ಟಿಲು ತಯಾರಿಕೆ ಮಾಡಲಾಗುತ್ತಿದೆ.ಈ ತಿಂಗಳು 14 ರಂದು ನಡೆಯೋ ಅಭಿಷೇಕ ಪುತ್ರ ನಾಮಕಾರಣ ಕಾರ್ಯಕ್ರಮ ಈ ತೊಟ್ಟಿಲು ನೀಡಲಾಗುತ್ತದೆ.
ಈ ಹಿಂದೆ ಇದೇ ಚಿತ್ರಗಾರ ಮನೆಯಿಂದ ರಾಕಿಂಗ್ ಸ್ಟಾರ್ ಯಶ್ ಮನೆಗೆ ತೊಟ್ಟಿಲು ಹೋಗಿತ್ತು.ಅಂಬರೀಶ್ ಆಸೆಯಂತೆ ಕಲಘಟಗಿಯಲ್ಲಿ ತೊಟ್ಟಿಲು ತಯಾರಿಸಲಾಗಿತ್ತು.ಇದೀಗ ಅಂಬರೀಶ್ ಮೊಮ್ಮಗನ ನಾಮಕರಣಕ್ಕೂ ಕಲಘಟಗಿಯಿಂದ ತೊಟ್ಟಿಲು ಹೋಗುತ್ತಿದೆ.ಸುಮಾರು 4 ತಲೆಮಾರುಗಳಿಂದ ಚಿತ್ರಗಾರ ಕುಟುಂಬ ತೊಟ್ಟಿಲು ತಯಾರಿಕೆಯಲ್ಲಿ ತೊಡಗಿದೆ.
ತೊಟ್ಟಿಲಲ್ಲಿ ಕೃಷ್ಣನ ಅವತಾರ,ದಶಾವತಾರದ ಚಿತ್ರಕಲೆ ಕೆಮಿಕಲ್ ರಹಿತ, ವಿಶೇಷ ಕಟ್ಟಿಗೆಯಿಂದ ಮಾಡಲಾಗುತ್ತದೆ. ಧಾರವಾಡದ ಐಐಟಿ ಉದ್ಘಾಟನೆಗೆ ಬಂದಾಗ ಪ್ರಧಾನಿ ಮೋದಿ ಅವರಿಗೂ ಈ ತೊಟ್ಟಿಲು ಮಾದರಿ ಉಡುಗೊರೆ ನೀಡಲಾಗಿದೆ.ಈ ಹಿಂದೆ ಡಾ ರಾಜ್ ಕುಮಾರ್,
ರಾಮಕೃಷ್ಣ ಹೆಗಡೆ ಸೇರಿದಂತೆ ಹಲವಾರು ಗಣ್ಯರು ಈ ತೊಟ್ಟಿಲಿಗೆ ಮಾರುಹೋಗಿದ್ದರು. ಕಾಲಘಟಗಿಗೆ ಬಂದು ತೊಟ್ಟಿಲು ತೆಗೆದುಕೊಂಡು ಹೋಗಿದ್ದರು. ಇಷ್ಟೇ ಅಲ್ಲದೇ ದೇಶ ವಿದೇಶಗಳಿಗೂ ಕೂಡ ಕಲಘಟಗಿ ತೊಟ್ಟಿಲು ರವಾನೆ ಮಾಡಲಾಗಿದೆ. ಈ ತೊಟ್ಟಿಲಗಳ ಬಗ್ಗೆ ಪಿಎಚ್ಡಿ ಸಹ ಬರೆಯಲಾಗಿದೆ.
ಕಲ್ಮೇಶ ಮಂಡ್ಯಾಳ