ನೆಲಮಂಗಲ: ದ್ರಾಕ್ಷಿ ತುಂಬಿದ ಬುಲೆರೊ ವಾಹನ ಅಪಘಾತಕ್ಕೀಡಾಗಿ ದ್ರಾಕ್ಷಿಯೆಲ್ಲಾ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ಘಟನೆ ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದೆ.
ನಟಿ ರನ್ಯಾ ರಾವ್ ಫ್ಲಾಟ್ ಮೇಲೆ ದಾಳಿ: ಕೋಟಿ ಕೋಟಿ ಮೌಲ್ಯದ ಚಿನ್ನ ಸೀಜ್!
ನೆಲಮಂಗಲ ಬಳಿಯ ಮಾಕಳಿ ಬಳಿ ಬುಲೆರೋ ವಾಹನ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ದ್ರಾಕ್ಷಿ ಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ನಾ ಮುಂದು ತಾ ಮುಂದು ಎಂದು ದ್ರಾಕ್ಷಿಯನ್ನು ಜನತೆ ಹೊತ್ತೊಯ್ದಿದ್ದಾರೆ. ಅಪಘಾತ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.
ತುಮಕೂರು ಮಾರ್ಗದಲ್ಲಿ ಬೆಂಗಳೂರು ನಗರಕ್ಕೆ ಬರುತ್ತಿದ್ದ ಬುಲೆರೋ ವಾಹನ ಚಾಲಕನಿಗೆ ಗಾಯವಾಗಿದೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ.