ಕನ್ನಡದ ಓಂ ಸಿನಿಮಾ ರಿಲೀಸ್ ಆಗಿ ಇದೀಗ 30 ವರ್ಷಗಳು ಕಳೆದಿವೆ. ಈ ಸಿನಿಮಾದ ಹಿಂದಿನ ಕಥೆಗಳು ಈಗಲೂ ಕುತೂಹಲ ಮೂಡಿಸುತ್ತವೆ. ಚಿತ್ರದ ರಿಲೀಸ್ ಬಗ್ಗೇನೆ ಒಂದಿಷ್ಟು ಕಥೆಗಳಿವೆ. ಸಿನಿಮಾದ ಒಟ್ಟು ರೀ-ರಿಲೀಸ್ ಲೆಕ್ಕ 550 ಆಗುತ್ತದೆ. 1995 ರಲ್ಲಿ ಬಂದಿದ್ದ ಈ ಚಿತ್ರವನ್ನ 2015 ರಲ್ಲಿ ರಾಜ್ ಫ್ಯಾಮಿಲಿ ಟಿವಿ ರೈಟ್ಸ್ ಮಾರಾಟ ಮಾಡಿತ್ತು. ಅಲ್ಲಿವರೆಗೂ ಓಂ ಸಿನಿಮಾ ಇಡೀ ವರ್ಷ ಒಂದಿಲ್ಲ ಒಂದು ಥಿಯೇಟರ್ನಲ್ಲಿ ರಿಲೀಸ್ ಆಗಿತ್ತು. ಕೇವಲ ೬೮ ಲಕ್ಷದಲ್ಲಿ ತಯಾರಾಗಿದ್ದ ಕನ್ನಡದ ಈ ಸಿನಿಮಾದ ಮೈಸೂರು ಏರಿಯಾ ವಿತರಣೆ ಹಕ್ಕನ್ನ ಎಚ್.ಡಿ.ಕುಮಾರ್ ಸ್ವಾಮಿ ಅವರೆ ಪಡೆದುಕೊಂಡಿದ್ದರು.
ಓಂ ಸಿನಿಮಾ ಚಿತ್ರ ಬಿಡುಗಡೆಯಾಗಿ 30 ವರ್ಷ ಕಳೆದರೂ ಇಂದಿಗೂ ಸಿನಿಮಾದ ತಾಜಾತಾನ ಮಾತ್ರ ಹಾಗೆಯೇ ಉಳಿದುಕೊಂಡಿದೆ. ಆದ್ರೆ ಓಂ ಚಿತ್ರಕ್ಕೆ ಮೊದಲ ಆಯ್ಕೆ ಪ್ರೇಮಾ ಆಗಿರಲಿಲ್ಲ. ಉಪೇಂದ್ರ ಈ ಸಿನಿಮಾಗೆ ಬೇರೆ ನಟಿಯನ್ನು ಆಯ್ಕೆ ಮಾಡುವ ಬಗ್ಗೆ ಪ್ಲಾನ್ ಮಾಡಿಕೊಂಡಿದ್ದರಂತೆ. ಆದ್ರೆ ಅಂತಿಮವಾಗಿ ಪ್ರೇಮಾ ಸಿನಿಮಾಗೆ ಆಯ್ಕೆಯಾಗಿದ್ದರು. ತಾನು ಓಂ ಚಿತ್ರಕ್ಕೆ ಮೊದಲ ಆಯ್ಕೆಯಾಗಿರಲಿಲ್ಲ ಎಂದು ಸ್ವತಃ ನಟಿ ಪ್ರೇಮಾ ಅವರೇ ಹೇಳಿಕೊಂಡಿದ್ದಾರೆ.
ರಾಜ್ಕುಮಾರ್ ಅವರಿಗೆ ಚೆನ್ನ ಅನ್ನೋ ಬಾಡಿಗಾರ್ಡ್ ಇದ್ದರು. ಚೆನ್ ಅವರು ನಮ್ಮ ಚಾಮರಾಜಪೇಟೆಯ ಮನೆಗೆ ಬರುತ್ತಿದ್ದರು. ಆವಾಗ ಓಂ ಸಿನಿಮಾಗೆ ನಾಯಕಿಯಾಗಿ ನಿನ್ನನ್ನೇ ಹಾಕಿಸುವೆ ಎಂದು ಹೇಳುತ್ತಿದ್ದರು. ನನಗೆ ಆಗ ಅಷ್ಟು ಸಿನಿಮಾ ಬಗ್ಗೆ ಗೊತ್ತಿರಲಿಲ್ಲ. ಏನದು ಓಂ ಅಂತ ನಾನು ಸುಮ್ಮನೇ ಇದ್ದೆ. ಡಾ.ರಾಜ್ಕುಮಾರ್ ವಾಕಿಂಗ್ ಹೋಗುವಾಗ ಪ್ರೇಮಾ ಅನ್ನೋ ಹುಡುಗಿ ಇದ್ದಾಳೆ. ಸವ್ಯಸಾಚಿ ಸಿನಿಮಾ ಮಾಡಿದ್ದಾಳೆ ಎಂದು ಚೆನ್ನ ಹೇಳುತ್ತಿದ್ದರಂತೆ. ಪ್ರತಿದಿನ ಚೆನ್ನ ಅವರು ನನಗೆ ಬಂದು ಹೇಳುತ್ತಿದ್ದರು. ಒಮ್ಮೆ ಸವ್ಯಸಾಚಿಯ ಹಾಡನ್ನು ಅಪ್ಪಾಜಿ ನೋಡಿದ್ದರು. ಆಗ ರಾಜ್ಕುಮಾರ್ ಅವರಿಗೆ ನಾನು ಇಷ್ಟವಾಗಿದ್ದೆ ಎಂದು ಪ್ರೇಮಾ ಹೇಳಿದ್ದಾರೆ.
ಮನೆಯಲ್ಲಿ ಓಂ ಸಿನಿಮಾಗೆ ನಾಯಕಿ ಯಾರು ಅಂತ ಮುರುಳಿ ಸರ್, ಉಪೇಂದ್ರ ಸೇರಿದಂತೆ ಎಲ್ಲರೂ ಡಿಸ್ಕಸ್ ಮಾಡುತ್ತಿದ್ದರಂತೆ. ಆಗ ಪಾರ್ವತಮ್ಮ ಅವರು ಸುಧಾರಾಣಿಯನ್ನು ಹಾಕಿಕೊಳ್ಳಿ ಎಂದು ಸಲಹೆ ನೀಡಿದರಂತೆ. ಆಗ ಮುರುಳಿ ಅವರು ಒಂದು ಕ್ಷಣ ಶಾಕ್ ಆಗಿದ್ದರಂತೆ. ಮುರುಳಿ ಅವರಿಗೆ ಚಾಮರಾಜಪೇಟೆಯ ಹುಡುಗಿಯೇ ಬೇಕಾಗಿದ್ದರು. ಜೂಹಿ ಚಾವ್ಲಾ ಅವರನ್ನು ಓಂ ಸಿನಿಮಾಗೆ ತರಬೇಕು ಅನ್ನೋದು ಉಪೇಂದ್ರ ಆಸೆಯಾಗಿತ್ತು. ಇನ್ನು ಸೌಂದರ್ಯಾ 10 ದಿನಕ್ಕೆ ಒಂದರ ಹಾಗೆ ಡೇಟ್ ಕೊಡ್ತೀನಿ ಅಂತ ಹೇಳಿದ್ದರಂತೆ. ಇನ್ನು ಜೂಹಿ ಚಾವ್ಲಾ ಅವರದ್ದು ಏನು ಅಂತ ಗೊತ್ತಿಲ್ಲ. ಆದ್ರೆ ಓಂ ಸಿನಿಮಾಗೆ ಫ್ರೀಯಾಗಿ ಡೇಟ್ ಕೊಡುವ ನಟಿ ಬೇಕಿತ್ತು. ನಾನು ಸವ್ಯಸಾಚಿ ಸಿನಿಮಾ ಮಾಡಿ ಬೇರಾವ ಆಫರ್ ಇರಲಿಲ್ಲ. ನನ್ನ ಡೇಟ್ ಎಲ್ಲಾ ಫ್ರೀ ಆಗಿತ್ತು. ಯಾವಾಗ ಏನು ಸೀನ್ ಬರುತ್ತೆ ಅಂತ ಗೊತ್ತಿರಲಿಲ್ಲ. ಹಾಗಾಗಿ ಚಿತ್ರತಂಡ ಡೇಟ್ ಫ್ರಿಯಾಗಿರುವ ನಾಯಕಿಯನ್ನ ಹುಡುಕುತ್ತಿತ್ತು.
ಅಕ್ರಮ ಚಿನ್ನ ಸಾಗಾಟ ಪ್ರಕರಣ: ನಟಿ ರನ್ಯಾ ರಾವ್ಗೆ 14 ದಿನ ನ್ಯಾಯಾಂಗ ಬಂಧನ!
ಈ ಸಿನಿಮಾದ ಚರ್ಚೆ ವೇಳೆ ಆಗಮಿಸಿದ ಡಾ.ರಾಜ್ಕುಮಾರ್ ಓಂ ಚಿತ್ರಕ್ಕೆ ಪ್ರೇಮಾಳನ್ನು ಹಾಕಿಕೊಳ್ಳುವಂತೆ ಹೇಳಿದರಂತೆ. ಹಾಗಾಗಿ ಅಂತಿಮವಾಗಿ ಓಂ ಸಿನಿಮಾಗೆ ಪ್ರೇಮಾ ನಾಯಕಿಯಾದರು. ಇಂದು ಓಂ ಸಿನಿಮಾ ಚಂದವನದಲ್ಲಿ ಇತಿಹಾಸ ಬರೆದಿದೆ. ಸವ್ಯಸಾಚಿ ಸಿನಿಮಾ ನೋಡಿದ ಬಳಿಕ 10 ವರ್ಷದ ಹಿಂದೆ ಆಗಿದ್ರೆ ಪ್ರೇಮಾ ತಮ್ಮ ಸಿನಿಮಾಗೆ ನಾಯಕಿಯಾಗಿರುತ್ತಿದ್ದರು ಎಂದು ಮೆಚ್ಚುಗೆ ಸೂಚಿಸಿದ್ದರಂತೆ ಎಂದು ಪ್ರೇಮಾ ಸಂದರ್ಶನದಲ್ಲಿ ಹೇಳಿದ್ದಾರೆ.