ರಾಜಕೀಯ ನಾಯಕರು ಹಿಟ್ಲರ್ ನೀತಿ ಅನುಸರಿಸಬೇಡಿ ಎಂದು ಹೇಳುವ ಮೂಲಕ ಡಿಕೆಶಿ ಅವರ ನಟ್ಟು, ಬೋಲ್ಟು ಹೇಳಿಕೆಗೆ ಸುದೀಪ್ ಮ್ಯಾನೇಜರ್ ಕಿಡಿಕಾರಿದ್ದಾರೆ.
Bhagyalakshmi serial: ಭಾಗ್ಯಗೆ ಸಿಕ್ತು ಅಡುಗೆ ಕೆಲಸದ ಕಾಂಟ್ರಾಕ್ಟ್! ಯಶಸ್ಸಿನ ಮೊದಲ ಹೆಜ್ಜೆ ಇಟ್ಟ ಹೆಣ್ಣು!
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸ್ಯಾಂಡಲ್ವುಡ್ ನಟ, ನಟಿಯರು, ಕಲಾವಿದರ ನಟ್ಟು, ಬೋಲ್ಟ್ ಟೈಟ್ ಮಾಡೋ ಬಗ್ಗೆ ಹೇಳಿಕೆ ನೀಡಿದ್ದರು. ಈ ಬಗ್ಗೆ ಸ್ಯಾಂಡಲ್ವುಡ್ನಲ್ಲಿ ಪರ-ವಿರೋಧದ ಚರ್ಚೆ ಜೋರಾಗಿದೆ. ಇದರ ಮಧ್ಯೆ ಕಿಚ್ಚ ಸುದೀಪ್ ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ್ ಅವರು ಫೇಸ್ಬುಕ್ ಲೈವ್ಗೆ ಬಂದು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಮಂಡ್ಯ ಶಾಸಕ ರವಿ ಗಣಿಗ ಅವರಿಗೆ ಸುದೀಪ್ ಹೆಸರನ್ನು ಸರಿಯಾಗಿ ಹೇಳುವ ಧೈರ್ಯವೂ ಇಲ್ಲ. ಸುಮ್ಮನೆ ಆರೋಪ ಮಾಡೋದಲ್ಲ. ಆಮಂತ್ರಣ ಕೊಡದೆ ಸುದೀಪ್ ಅವರು ಹೇಗೆ ಬರೋಕೆ ಸಾಧ್ಯ. ಸಾಧು ಕೋಕಿಲ ಅವರು ಮಾಡಿರುವ ಚಿತ್ರೋತ್ಸವದ ಅಪಭೃಂಶ ಇದು ಎಂದು ಕಿಡಿಕಾರಿದ್ದರು.
ಅಲ್ಲದೇ ವಿವಾದಾತ್ಮಕ ಹೇಳಿಕೆಗಳಿಗೆ ಚಕ್ರವರ್ತಿ ಚಂದ್ರಚೂಡ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರವಿಕುಮಾರ್ ಗಣಿಗ ಅವರ ಟೀಕೆಗಳನ್ನು ಖಂಡಿಸಿ, ರಾಜಕಾರಣಿಗಳು ಚಿತ್ರರಂಗವನ್ನು ನಾಶಮಾಡಲು ಯತ್ನಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ ಮತ್ತು ರಾಜಕೀಯ ನಾಯಕರು ಹಿಟ್ಲರ್ ನೀತಿಯನ್ನು ಅನುಸರಿಸಬಾರದು ಎಂದು ಹೇಳಿದ್ದಾರೆ.
ಇದಾದ ಬಳಿಕ ಮಾತಾಡಿದ ಚಕ್ರವರ್ತಿ ಚಂದ್ರಚೂಡ್ ಅವರು, ರವಿ ಗಣಿಗ ಅವರೇ ನೀವು ಮರೆತು ಬಿಟ್ರಿ, ಡಿಕೆ ಸುರೇಶ್ ಅವರಿಗೆ ಏನಾಯ್ತು ಅಂತ. ನಿಮ್ಮನೆಲ್ಲಾ ನಾವು ತುಂಬಾ ಪ್ರೀತಿಸುತ್ತೇವೆ. ಹೀಗೆಲ್ಲಾ ನಟ್ಟು, ಬೋಲ್ಟ್ ಅಂತ ಮಾತಾಡಿ ಕೆಟ್ಟವರು ಆಗಬಾರದು. ರಾಜಕಾರಣ ಯಾರಪ್ಪನ ಸ್ವತ್ತು ಅಲ್ಲ, ನಿಮ್ಮ ಅಪ್ಪನ ಸ್ವತ್ತು ಅಲ್ಲ ವಿಧಾನಸೌಧ. ಸಿನಿಮಾನೂ ಯಾರಪ್ಪನ ಸ್ವತ್ತು ಅಲ್ಲ. ನಿಮಗೆಲ್ಲಾ ಎಲ್ಲರನ್ನು ಒಂದು ಕಡೆ ಸೇರಿಸಲು ಆಗುತ್ತಿಲ್ಲ. ಕೋವಿಡ್ ಕಾಲದಿಂದಲೂ ಆಗಿರೋ ಹಗರಣವನ್ನು ನಾನು ಹೇಳಬಲ್ಲೇ ಅಂತ ಕಿಡಿ ಕಾರಿದ್ದಾರೆ.