ಸ್ಟೇಜ್ ಮೇಲೆ ಮಾತನಾಡುತ್ತಿರುವಾಗ, ಮದುವೆ ಫಂಕ್ಷನ್ ನಲ್ಲಿ ಡಾನ್ಸ್ ಮಾಡುತ್ತಾ, ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಾ ಅಥವಾ ಕ್ರಿಕೆಟ್ ಆಡುವಾಗಲೇ ಹೃದಯಘಾತವಾಗಿರುವ ಅನೇಕ ಪ್ರಕರಣಗಳು ನಮ್ಮ ಕಣ್ಣಮುಂದಿವೆ. ಹೀಗಾಗಿ ಪುಟ್ಟ ಹೃದಯದ ವಿಚಾರದಲ್ಲಿ ಯಾವತ್ತಿಗೂ ಕೂಡ ನಿರ್ಲಕ್ಷ್ಯ ಮಾಡಬಾರದು..
ನಿಮ್ಮ ಮಕ್ಕಳು ಜಾಸ್ತಿ ಮೊಬೈಲ್ ಗೆ ಅಡಿಕ್ಟ್ ಆಗಿದ್ದಾರಾ!? ಹಾಗಿದ್ರೆ ಹೀಗೆ ಮಾಡಿ!
ಹೃದಯಾಘಾತ ಎಷ್ಟು ಮಾರಕವೋ ಅಷ್ಟೇ ಸುಲಭವಾಗಿ ಅದನ್ನು ತಡೆಗಟ್ಟಬಹುದು. ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಹೃದಯಾಘಾತವಾಗುವುದನ್ನು ಹಾಗೂ ಹೃದಯಾಘಾತದಿಂದಾಗುವ ಸಾವನ್ನು ತಪ್ಪಿಸಬಹುದು
ನಿಮ್ಮ ಜೀವನಶೈಲಿಯಲ್ಲಿ ಕೆಲವು ಸರಳವಾದ ಬದಲಾವಣೆ ಮಾಡಿಕೊಳ್ಳುವುದರಿಂದ ಹೃದಯವನ್ನು ಗಟ್ಟಿಪುಟ್ಟಾಗಿಸಿ, ಮುಂಬರುವ ಹೃದಯಾಘಾತದ ಅಪಾಯ ಹಾಗೂ ಹೃದಯಾಘಾತದಿಂದ ತಪ್ಪಿಸಿಕೊಳ್ಳಬಹುದು.
ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರದ ಸೇವನೆಯೂ ಅಷ್ಟೇ ಮುಖ್ಯ. ನಿಮ್ಮ ಆಹಾರದಲ್ಲಿ ಹಣ್ಣು, ತರಕಾರಿ, ಧಾನ್ಯ, ಆರೋಗ್ಯಕರ ಕೊಬ್ಬಿನಾಂಶ ಹೊಂದಿರುವ ಆಹಾರಗಳು ಹಾಗೂ ಹೆಚ್ಚು ಪ್ರೋಟಿನ್ ಇರುವ ಆಹಾರಗಳನ್ನು ಸೇವಿಸಬೇಕು.
ಉಪ್ಪು ಸಕ್ಕರೆಯ ಬಳಕೆಯನ್ನು ಮಿತಿಗೊಳಿಸಿ ಆಹಾರವನ್ನು ಸೇವಿಸಬೇಕು, ಏಕೆಂದರೆ ಈ ಪದಾರ್ಥಗಳಲ್ಲಿರುವ ಸೋಡಿಯಂ ಅಂಶ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ, ಈ ಮೂಲಕ ಹೃದಯಘಾತದ ಅಪಾಯ ಹೆಚ್ಚಾಗುತ್ತದೆ.
ದೈಹಿಕ ಚಟುವಟಿಕೆ ಹೃದಯವನ್ನು ಬಲಪಡಿಸುತ್ತದೆ. ದಿನಕ್ಕೆ 30 ನಿಮಿಷಗಳ ಕಾಲ ವಾಲ್ಕಿಂಗ್, ಜಿಮ್, ಯೋಗ ಹಾಗೂ ಸ್ಟ್ರೆಚಿಂಗ್ ಮಾಡುವುದರಿಂದ ನೀವು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಒತ್ತಡದವನ್ನು ಕಡಿಮೆ ಮಾಡುವುದು ತುಂಬಾ ಮುಖ್ಯ. ಅಧಿಕ ರಕ್ತದೊತ್ತಡ ಹೃದಯಾಘಾತಕ್ಕೆ ಮುಖ್ಯ ಕಾರಣ. ಆದ್ದರಿಂದ ಧ್ಯಾನ, ವ್ಯಾಯಾಮ ಮಾಡುವುದರಿಂದ ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು.
ಧೂಮಪಾನ ಮಾಡುವುದರಿಂದ ರಕ್ತನಾಳಗಳಿಗೆ ಹಾನಿಯಾಗುತ್ತದೆ, ಇದರಿಂದ ಹೃದಯಾಘಾತದ ಅಪಾಯ ಹೆಚ್ಚುತ್ತದೆ. ಅತಿಯಾಗಿ ಧೂಮಪಾನ ಮಡುವುದರಿಂದ ರಕ್ತದಲ್ಲಿನ ಕೊಲಸ್ಟ್ರಾಲ್ ಮಟ್ಟ ಹೆಚ್ಚುತ್ತದೆ ಇದರಿಂದ ಹಾರ್ಟ್ ಅಟ್ಯಾಕ್ ಅಪಾಯ ಹೆಚ್ಚು.
ಹೃದಯಾಘಾತಕ್ಕೆ ಮುಖ್ಯ ಕಾರಣಗಳಲ್ಲಿ ಒಂದು ರಕ್ತರದೊತ್ತಡ ಕೂಡ ಹೌದು, ಅಧಿಕ ರಕ್ತದೊತ್ತಡ ಹೃದಯವನ್ನು ಒತ್ತಡೊಕ್ಕಪಡಿಸುತ್ತದೆ. ಇದು ಹೃದಯದ ಅಪದಮನೀಯಗಳಲ್ಲಿ ಪ್ಲೇಕ್ ಶೇಖರಣೆಯಾಗಲು ಕಾರಣವಾಗುತ್ತದೆ. ಆದ್ದರಿಂದ ರಕ್ತದೊತ್ತಡ ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಹೃದಯಾಘಾತವಾಗದಂತೆ ತಡೆಯಲು, ತೂಕ ನಿಯಂತ್ರಣ ಕೂಡ ಬಹಳ ಮುಖ್ಯ. ಪೌಷ್ಟಿಕ ಆಹಾರದ ಸೇವನೆ ಹೆಚ್ಚಿಸಿ, ಜಂಕ್ ಫುಡ್ ಅನ್ನು ಕಡಿಮೆ ಮಾಡಿ. ದೇಹದಲ್ಲಿ ಕೊಬ್ಬು ಹಾಗೂ ಬೊಜ್ಜು ಹೆಚ್ಚಾಗುತ್ತಿದ್ದಂತೆ ಹೃದಯಾಘಾತದ ಅಪಾಯವೂ ಸಹ ಹೆಚ್ಚಾಗುತ್ತಾ ಹೋಗುತ್ತದೆ.
ರಕ್ತದ ಪರಿಚಲನೆಯನ್ನು ಹೆಚ್ಚಿಸಲು ಹೆಚ್ಚು ನೀರು ಸೇವನೆ ಬಹಳ ಮುಖ್ಯ. ನಿರ್ಜಲೀಕರಣವನ್ನು ತಡೆದು, ಇದು ರಕ್ತ ಹೆಪ್ಪುಗಟ್ಟುವಿಕೆಯನ=ನ್ನು ತಡೆಯುತ್ತದೆ.
ಎದೆ ನೋವು, ಉಸಿರಾಟದ ತೊಂದರೆ, ತಲೆ ತಿರುಗುವುದು, ದವಡೆ ಅಥವಾ ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುವುದು ಇವೆಲ್ಲವೂ ಸಹ ಹೃದಯಾಘಾತದ ಮನ್ಸೂಚನೆಗಳು, ಈ ಲಕ್ಷಣಗಳು ಕಂಡು ಬಂದರೆ ಕೂಡಲೆ ವೈದ್ಯರನ್ನು ಬೇಟಿ ಮಾಡಿ. ಇದರಿಂದ ಪ್ರಾಣಾಪಾಯವನ್ನು ತಪ್ಪಿಸಬಹುದು.