ಬೆಂಗಳೂರು: ನಮ್ಮ ಸ್ಟಾರ್ ಪ್ರಶ್ನೆಗಳಿಗೆ ಸಚಿವರಿಂದ ಯಾವುದೇ ಉತ್ತರ ಸಿಗುತ್ತಿಲ್ಲ ಅಂತ ಪರಿಶತ್ ಶಾಸಕ ಟಿ.ಎ ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸಭೆ ಕಲಾಪದಲ್ಲಿಂದು ಸದಸ್ಯರು ಹಾಗೂ ಸಚಿವರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಪರಿಶತ್ ಶಾಸಕ ಟಿ.ಎ ಶರವಣ ಅವರು ಮಾತನಾಡಿದ್ದು,
ಕಳೆದ ಬಾರಿ 800 ಕ್ಕೂ ಹೆಚ್ಚು ಪ್ರಶ್ನೆ ಕೇಳಿದ್ದೆವು. ಕೇವಲ 300 ಪ್ರಶ್ನೆಗಳಿಗೆ ಮಾತ್ರ ಉತ್ತರ ಕೊಟ್ಟಿದ್ದಾರೆ. ಕಳೆದ ಅಧಿವೇಶನದಲ್ಲಿ ಉತ್ತರ ಕೊಡಿ ಅಂತ ಸರ್ಕಾರಕ್ಕೆ ಸೂಚನೆ ಕೊಟ್ರಿ ಆದ್ರೂ ಸಹ ಯಾವುದೇ ಉತ್ತರ ಸಿಗುತ್ತಿಲ್ಲ, ನಾವು ಪ್ರಶ್ನೆ ಕೇಳೋದೆ ತಪ್ಪಾ ಎಂದು ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀವು ಪ್ರತಿದಿನ ಮೊಸರು ತಿನ್ನುತ್ತೀರಾ..? ಹಾಗಾದ್ರೆ ನೀವು ಈ ವಿಷಯಗಳನ್ನು ಮೊದಲು ತಿಳಿದುಕೊಳ್ಳಲೇಬೇಕು!
ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ, ಸಂಬಂಧಿಸಿದ ಸಚಿವರು ಲಿಖಿತ ಉತ್ತರ ಕೊಡುವಂತೆ ಹಾಗೂ ಈ ಬಾರಿ ಆ ರೀತಿ ಮಾಡಬೇಡಿ, ನಾಳೆಯೇ ಉತ್ತರ ಕೊಡುವ ಪ್ರಯತ್ನ ಮಾಡಿ ಅಂತ ಸಚಿವರುಗಳಿಗೆ ಸಭಾಪತಿ ಹೊರಟ್ಟಿ ಸೂಚನೆ ನೀಡಿದ್ದಾರೆ.