ನವದೆಹಲಿ: ಮೊದಲು ಗುಜರಾತ್ ಮಾದರಿ ಅಂತಾ ಇದ್ದರು. ಈಗ ಕರ್ನಾಟಕ ಮಾದರಿ ಆಗುತ್ತಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡುವವರು, ಉಳ್ಳವರು ಮತ್ತು ಬಿಜೆಪಿ ನಾಯಕರು, ಬಡವರಿಗೆ ಬಾಯಿ ಇಲ್ಲ. ಹೀಗಾಗಿ, ಮಾತನಾಡಲ್ಲ.
ನೀವು ಪ್ರತಿದಿನ ಮೊಸರು ತಿನ್ನುತ್ತೀರಾ..? ಹಾಗಾದ್ರೆ ನೀವು ಈ ವಿಷಯಗಳನ್ನು ಮೊದಲು ತಿಳಿದುಕೊಳ್ಳಲೇಬೇಕು!
ನಾವು ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ. ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸ್ಥಿತಿ ಹೆಚ್ಚಿಸಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಮೊದಲು ಗುಜರಾತ್ ಮಾದರಿ ಅಂತಾ ಇದ್ದರು. ಈಗ ಕರ್ನಾಟಕ ಮಾದರಿ ಆಗುತ್ತಿದೆ. ಬ್ಲಡ್ ಮತ್ತು ದುಡ್ಡು ಎರಡೂ ಚಲಾವಣೆಯಲ್ಲಿ ಇದ್ದರೆ ಮಾತ್ರ ಆರೋಗ್ಯಕ್ಕೆ ಒಳ್ಳೆಯದು ಎಂದಿದ್ದಾರೆ.
ವೀರಪ್ಪ ಮೊಯ್ಲಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದರ ಬಗ್ಗೆ ನಮ್ಮ ಹೈಕಮಾಂಡ್ ನೋಡಿಕೊಳ್ಳುತ್ತೆ. ಖರ್ಗೆ ಅವರು ಯಾರೂ ಮಾತಾಡಬೇಡಿ ಎಂದಿದ್ದಾರೆ. ಹಾಗಾಗಿ ಮಾತಾಡಲ್ಲ. ಸದ್ಯ ಎರಡು ಕುರ್ಚಿಗಳು ಭರ್ತಿ ಇವೆ ಎಂದು ತಿಳಿಸಿದ್ದಾರೆ.