ಬೆಂಗಳೂರು: ಪಿಜಿ ನಡೆಸುತ್ತಿದ್ದ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕೋಣನಕುಂಟೆ ಠಾಣಾ ವ್ಯಾಪ್ತಿಯ ಕೊತ್ತನೂರಿನ ನ್ಯೂ ಆಶಾ ಪಿಜಿಯ ನಾಲ್ಕನೇ ಫ್ಲೋರ್ ರೂಂನಿನಲ್ಲಿ ನಡೆದಿದೆ. ಹೇಮಾವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಯಾಗಿದ್ದು, ಮೃತ ಹೇಮಾವತಿ ಗಂಡನನ್ನ ತೊರೆದು ಮಗಳ ಜೊತೆ ಇದ್ದರು.
ಈ ಮಧ್ಯೆ ಶರವಣ ಎಂಬ ಸ್ನೇಹಿತ ಆಗಾಗ ರೂಮಿಗೆ ಬರ್ತಿದ್ದನು. ಮೊನ್ನೆ ರೂಮಿಗೆ ಬಂದಾಗ ಇಬ್ಬರಿಗೂ ಜಗಳ ಆಗಿದೆ. ಗಂಡನ ಆಸ್ತಿ ಪತ್ರ ತೆಗೆದುಕೊಂಡಿದ್ದಿಯಾ ಎಂದು ಜಗಳ ಮಾಡಿದ್ದಾರೆ. ಆದರೆ ಜಗಳ ಆದ 1 ಗಂಟೆಯಲ್ಲಿ ಸೂಸೈಡ್ ಮಾಡಿಕೊಂಡಿದ್ದಾಳೆ ಎಂದು ಪಿಜಿ ಹುಡುಗರು ಪೊಲೀಸರಿಗೆ ಮಾಹಿತಿ ನೀಡಿದ್ದರು.
Crow In Dream: ಕನಸಿನಲ್ಲಿ ಕಾಗೆ ಬಂದ್ರೆ ಶುಭವೋ ಅಶುಭವೋ..? ಇಲ್ಲಿದೆ ನೋಡಿ ಮಾಹಿತಿ
ಪೊಲೀಸರು ಸ್ಥಳಕ್ಕೆ ಬಂದಾಗ ಶರವಣ ಅಲ್ಲೇ ಮಲಗಿದ್ದನು. ಬಳಿಕ ಮಗಳು ಕೊಟ್ಟ ದೂರಿನ ಮೇಲೆ ಕೇಸ್ ದಾಖಲು ಮಾಡಿದ್ದು, ಸದ್ಯ ಶರವಣ ಮತ್ತು ಆತನ ಸ್ನೇಹಿತನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆತ್ಮಹತ್ಯೆಯೋ ಕೊಲೆಯೋ ಎಂಬ ಬಗ್ಗೆ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.