ಚಿತ್ರದುರ್ಗ: ಚಿತ್ರದುರ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಆಪ್ತನ ಗೂಂಡಾಗಿರಿ ತೋರಿದ್ದಾನೆ. ಕುಡಿದ ಮತ್ತಿನಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಸಚಿವನ ಆಪ್ತನಿಂದ ಹಲ್ಲೆ ನಡೆಸಲಾಗಿದೆ. ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿ ಘಟನೆ ನಡೆದಿದೆ.
ಬೆಂ-ಮೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಿಬ್ಬಂದಿ, ವಾಹನ ಸವಾರರ ನಡುವೆ ಜಟಾಪಟಿ
ಉಸ್ತುವಾರಿ ಸಚಿವ ಡಿ.ಸುಧಾಕರ್ ಆಪ್ತ ಭರತ್ ರೆಡ್ಡಿ ಅಂಡ್ ಗ್ಯಾಂಗ್ ನಿಂದ ಕರ್ತವ್ಯ ನಿರತ ಪೊಲೀಸ್ ಪೇದೆ ದೇವರಾಜ್ ಹಾಗೂ ನಾಗರಾಜ್ ಮೇಲೆ ಹಲ್ಲೆ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಭರತ್ ರೆಡ್ಡಿ ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿಕೊಂಡು ಕುಡಿಯುತ್ತಿದ್ದ ಇದನ್ನ ಪ್ರಶ್ನಿಸಿದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೊಲೀಸ್ ಜೀಪ್ ಕೀ ಮೊಬೈಲ್ ಕಿತ್ತುಕೊಂಡು ದರ್ಪ ತೋರಿದ್ದಾನೆ. ನಾನು ಸಚಿವ ಸುಧಾಕರ್ ಪಿಎ ಎಂದು ಹೇಳಿ ಪೊಲೀಸರ ಯೂನಿಫಾರ್ಮ್ ಹರಿದು ಹಲ್ಲೆ ನಡೆಸಿದ್ದಾನೆ. ಆರೋಪಿಗಳಾದ ಭರತ್ ರೆಡ್ಡಿ, ಅರುಣ್, ರಾಕೇಶ್ ಎಂಬ ಮೂರು ಮಂದಿಯಿಂದ ಹಲ್ಲೆ ನಡೆದಿದ್ದು, ಘಟನಾ ಸ್ಥಳಕ್ಕೆ ಬಡಾವಣೆ ಠಾಣೆ ಪಿಎಸ್ಐ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಸಂಬಂಧ ಬಡಾವಣೆ ಪೊಲೀಸರ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.