ವಿಜಯಪುರ: ಕೆಲವೊಂದು ಕೆಲಸಗಳೇ ಹಾಗೇ.. ಅಲ್ಲಿ ಕುಟುಂಬಕ್ಕೆ ಸಮಯ ಕೊಡೋಕೆ ಸಾಧ್ಯನೇ ಆಗಲ್ಲ.. ಅವರ ಪ್ರತಿ ಕ್ಷಣವೂ ಸಹ ಕೆಲಸಕ್ಕಾಗಿ ಮುಡಿಪಾಗಿರುತ್ತೆ. ಮಳೆ ಬಿಸಿಲು, ಹಗಲು ಇರುಳು ಎನ್ನದೇ ಸಮಯವನ್ನು ಲೆಕ್ಕಿಸದೇ ಕೆಲಸ ಮಾಡಬೇಕಾಗುತ್ತೆ. ಅಂಥಹ ಕೆಲಸಗಳಲ್ಲಿ ಪೊಲೀಸ್ ಕೆಲಸವು ಒಂದು. ಇದೀಗ ತಮ್ಮ ಕೆಲಸದಿಂದಾಗಿ ತನ್ನ ಮಗುವನ್ನು ಕಳೆದುಕೊಂಡ ತಂದೆಯ ಹಾಕಿರೋ ಮೆಸೇಜ್ ವೊಂದು ಚರ್ಚೆಗೆ ಗ್ರಾಸವಾಗಿದೆ.
ಹೌದು, ವಿಜಯಪುರ ಜಿಲ್ಲಾ ಪೊಲೀಸ್ ಸಿಬ್ಬಂದಿಗಳ ಗ್ರೂಪ್ ನಲ್ಲಿ ಪೊಲೀಸ್ ಕಾನ್ಸಟೇಬಲ್ ವೊಬ್ಬರು ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿರುವವ ಮಗುವಿನ ಫೋಟೋದೊಂದಿಗೆ ಹಾಕಿರೋ ಮೆಸೇಜ್ ಭಾರೀ ವೈರಲ್ ಆಗುತ್ತಿದೆ. ನನ್ನ ಮಗನಿಗೆ ಚಿಕಿತ್ಸೆ ನೀಡಲು ರಜೆ ಸಿಗಲಿಲ್ಲ. ಕಡೆಗೂ ನನ್ನ ಮಗಾ ಉಳಿಯಲಿಲ್ಲ. ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು. ನನಗೆ ಬಹಳ ನೋವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ವಿಜಯಪುರ ನಗರದ ಗಾಂಧಿಔಕ್ ಪೊಲೀಸ್ ಠಾಣೆಯ ಕಾನ್ಸಸ್ಟೇಬಲ್ ಎ ಎಸ್ ಬಂಡುಗೊಳ ಅವರ ನವಜಾತ ಶಿಶು ಅನಾರೋಗ್ಯದ ಕಾರಣ ಐಸಿಯುನಲ್ಲಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಮಗು ಮೃತಪಟ್ಟ ಬಳಿಕ ಪೊಲೀಸ್ ಸಿಬ್ಬಂದಿಗಳ ಗ್ರೂಪ್ ನಲ್ಲಿ ಹೀಗೆಂದು ಮೇಸೇಜ್ ಹಾಕಿದ್ದಾರೆ. ಈ ಘಟನೆಯನ್ನು ಡಿಜಿಪಿ, ಗೃಹ ಸಚಿವ ಜಿ ಪರಮೇಶ್ವರ ಹಾಗೂ ಮಾಧ್ಯಮಗಳಿಗೆ ಜೊಹೇದ್ ಕಿಂಗ್ ಎಂಬ ಹೆಸರಿನ ಇನ್ಸ್ಟಾಗ್ರಾಂ ನಿಂದ ಟ್ಯಾಗ್ ಮಾಡಿದ್ದಾರೆ.
ಬೆಂ-ಮೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಿಬ್ಬಂದಿ, ವಾಹನ ಸವಾರರ ನಡುವೆ ಜಟಾಪಟಿ
ಈ ಕುರಿತು ಮಾಹಿತಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು, ಎ ಎಸ್ ಬಂಡುಗೋಳ ಯಾವುದೇ ರಜೆ ಕೇಳಿಲ್ಲ, ಮೌಖಿಕವಾಗಿ ಹಾಗೂ ಲಿಖಿತವಾಗಿ ಗಾಂಧಿಚೌಕ್ ಪೊಲೀಸ್ ಠಾಣಾಧಿಕಾರಿಗಳ ಬಳಿ ರಜೆ ಕೇಳಿಲ್ಲ. ನಿನ್ನೆ ಹಾಗೂ ಇಂದು ಕಾನ್ಸಸ್ಟೇಬಲ್ ಎ ಎಸ್ ಬಂಡುಗೋಳ ಕರ್ತವ್ಯಕ್ಕೆ ಹಾಜರಾಗಿಲ್ಲ. ಕಾನ್ಸಸ್ಟೇಬಲ್ ಎ ಎಸ್ ಬಂಡುಗೋಳ ಪತ್ನಿಗೆ ಇದು ಮೂರನೇ ಹೆರಿಗೆ ಎಂದು ತಿಳಿದು ಬಂದಿದೆ. ರಜೆಗಾಗಿ ಯಾವುದೇ ಮನವಿ ಮಾಡಿಲ್ಲ. ಇಲಾಖಾ ಸಿಬ್ಬಂದಿಗಳ ಗ್ರೂಪ್ ನಲ್ಲಿ ಇಂದು ಪೋಸ್ಟ್ ಹಾಕಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಈ ಘಟನೆ ಕುರಿತು ಪರವಿರೋಧ ಚರ್ಚೆ ನಡೆಯುತ್ತಿದೆ. ಈ ಘಟನೆ ಕುರಿತು ಮಾಹಿತಿ ಕಲೆ ಹಾಕಲಾಗುತ್ತದೆ ಎಸ್ಪಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯಿಸಿದ್ದಾರೆ.