ಬೆಂಗಳೂರು: ಪ್ಲಾಸ್ಟಿಕ್ ಬಳಸಿ ಮಾಡೋ ಇಡ್ಲಿ ಆಹಾರ ಪ್ರಿಯರ ಪಾಲಿಗೆ ಡೆಡ್ಲಿಯಾಗಿದೆ.. ಕಬಾಬ್, ಗೋಬಿ, ಕಲ್ಲಂಗಡಿಯಲ್ಲಿನ ಕಲರ್ ಜೀವಕ್ಕೆ ಕುತ್ತು ತರುತ್ತಿದೆ.. ಇದೀಗ ಅಂಗಡಿಯಲ್ಲಿ ತಯಾರಾಗೋ ಬಿಸಿ ಬಿಸಿ ಹೋಳಿಗೆ ಕೂಡ ಗ್ರಾಹಕರಿಗೆ ಗಂಡಾಂತರ ತಂದೊಡ್ತಿದೆ. ಹೌದು ಅಂಗಡಿಗಳಲ್ಲಿ ರೆಡಿಮೇಡ್ ಹೋಳಿಗೆ ತಯಾರಿಕೆಯಲ್ಲೂ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ ಎಂದು ಆರೋಪಿಸಲಾಗಿದ್ದು,
Crow In Dream: ಕನಸಿನಲ್ಲಿ ಕಾಗೆ ಬಂದ್ರೆ ಶುಭವೋ ಅಶುಭವೋ..? ಇಲ್ಲಿದೆ ನೋಡಿ ಮಾಹಿತಿ
ಇದೀಗ ರಾಜ್ಯದಾದ್ಯಂತ ಹೋಳಿಗೆ ಅಂಗಡಿಗಳ ಮೇಲೆ ಆಹಾರ ಇಲಾಖೆ ದಾಳಿ ಮಾಡಿದ್ದು, ಪ್ಲಾಸ್ಟಿಕ್ ಬಳಕೆ ಮಾಡಿರೋ ಅಂಗಡಿಗಳಿಗೆ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಹೋಳಿಗೆಗೆ ಪ್ಲಾಸ್ಟಿಕ್ ಕವರ್ ಬಳಸಿದ್ರೆ ವಿಷಕಾರಿ ಅಂಶ ಹೋಳಿಗೆ ಸೇರೋ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಈ ಬೆನ್ನಲ್ಲೇ ಹೋಳಿಗೆಯಲ್ಲೂ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಆರೋಗ್ಯ ಇಲಾಖೆ ನೋಟಿಸ್ ನೀಡಿದೆ.