ಬೆಂಗಳೂರು: ಸಿಸಿಬಿ ಮಾದಕದ್ರವ್ಯ ನಿಗ್ರಹದಳ ಕಾರ್ಯಾಚರಣೆ ನಡೆಸಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಡ್ರಗ್ ಪೆಡ್ಲರ್ ಗಳನ್ನು ಅರೆಸ್ಟ್ ಮಾಡಿದ್ದಾರೆ. ನೈಜೀರಿಯಾದ ಎಸ್ಸೋ ಜರ್ಮನ್, ಜಾನ್ ಚುಕುವಾ ಬಂಧಿತ ಆರೋಪಿಗಳಾಗಿದ್ದು, ಟೂರಿಸ್ಟ್ ವಿಸಾದಡಿ ಭಾರತಕ್ಕೆ ಬಂದು ನೆಲೆಸಿದ್ದ ಆರೋಪಿಗಳು,
ಮುಂಬೈಯಿಂದ ಮಾದಕ ವಸ್ತು ತರಿಸಿ ಪರಿಚಯಸ್ಥರು, ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಹಿಂದೆಯೂ ಸಹ ಡ್ರಗ್ ಮಾರಾಟ ಮಾಡಿ ಬಂಧನವಾಗಿದ್ದರು.
Crow In Dream: ಕನಸಿನಲ್ಲಿ ಕಾಗೆ ಬಂದ್ರೆ ಶುಭವೋ ಅಶುಭವೋ..? ಇಲ್ಲಿದೆ ನೋಡಿ ಮಾಹಿತಿ
ಜೈಲಿಂದ ರಿಲೀಸ್ ಆಗಿ ಕೆಆರ್ ಪುರಂ ಲಿಮಿಟ್ಸ್ ನಲ್ಲಿ ಮತ್ತೆ ಡ್ರಗ್ ಮಾರಾಟ ಮಾಡುತ್ತಿದ್ದರು. ಸದ್ಯ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 17 ಲಕ್ಷ ಮೌಲ್ಯದ 108 ಗ್ರಾಂ ಎಂಡಿಎಂಎ, 2 ಮೊಬೈಲ್,ತೂಕದ ಮಷಿನ್ ಸೀಜ್ ಮಾಡಲಾಗಿದೆ.