ಬೆಂಗಳೂರು : ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಬಿ.ಎಸ್. ಯಡಿಯೂರಪ್ಪನವರ ಕನಸಿನ ಕೂಸು ಭಾಗ್ಯಲಕ್ಷ್ಮಿ ಯೋಜನೆಗೆ ವರ್ಷ ತುಂಬಿದ್ದು, ಫಲಾನುಭವಿಗಳಿಗೆ ಮೊತ್ತ ಮಂಜೂರಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಳಿದೆ.
ರಾಜ್ಯ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಭಾಗ್ಯಲಕ್ಷ್ಮಿ ಯೋಜನೆಯಡಿ 2006-07ನೇ ಸಾಲಿನಲ್ಲಿ ನೋಂದಣಿಯಾಗಿತ್ತು. ಫಲಾನುಭವಿಗಳಿಗೆ 18 ವರ್ಷ ಪೂರ್ಣಗೊಂಡಿರುವುದರಿಂದ ಎಲ್ಐಸಿ ಯಿಂದ ಪರಿಪಕ್ವ ಮೊತ್ತ ಮಂಜೂರಾಗಿದೆ.
Crow In Dream: ಕನಸಿನಲ್ಲಿ ಕಾಗೆ ಬಂದ್ರೆ ಶುಭವೋ ಅಶುಭವೋ..? ಇಲ್ಲಿದೆ ನೋಡಿ ಮಾಹಿತಿ
ಒಟ್ಟು ಒಂದು ಲಕ್ಷ ರೂಪಾಯಿ ಫಲಾನುಭವಿಗಳಿಗೆ ಸಿಗಲಿದೆ. ರಾಜ್ಯದಲ್ಲಿ ಒಟ್ಟು 34.50 ಲಕ್ಷ ಭಾಗ್ಯಲಕ್ಷ್ಮಿ ಫಲಾನುಭವಿಗಳಿದ್ದಾರೆ. ಹೆಣ್ಣುಮಕ್ಕಳ ಉನ್ನತ ವ್ಯಾಸಂಗ ಸೇರಿದಂತೆ ಇತರೆ ಕಾರ್ಯಗಳಿಗೆ ಆ ಹಣ ನೆರವಾಗುವ ಉದ್ದೇಶದಿಂದ ಭಾಗ್ಯಲಕ್ಷ್ಮಿ ಯೋಜನೆ ಜಾರಿ ಮಾಡಲಾಗಿದೆ.
2006-07ನೇ ಸಾಲಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ ಬಾಂಡ್ ಮಾಡಿಸಿದ್ದ ಹೆಣ್ಣು ಮಗುವಿನ ಬಾಂಡ್ ಇದೀಗ ಪಕ್ವತೆಯನ್ನು ಹೊಂದಿದ್ದು (ಮೆಚ್ಯೂರಿಟಿ) ಫಲಾನುಭವಿಗಳಿಗೆ ಹಣ ನೀಡಲಾಗುತ್ತದೆ. ಆದ್ದರಿಂದ ಕೂಡಲೇ ನಿಮಗೆ ಕೊಡಲಾದ ಬಾಂಡ್ ತೆಗೆದುಕೊಂಡು ಅಂಗನವಾಡಿಗೆ ಭೇಟಿ ನೀಡಿ..