ವಾಷಿಂಗ್ಟನ್: ಚಿಂತೆ ಮಾಡಿದರೆ ಯುರೋಪಿನಂತೆ ನಮ್ಮ ದೇಶ ಹಾಳಾಗುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಅವರು, ನಾವು ಪುಟಿನ್ ಬಗ್ಗೆ ಚಿಂತೆ ಮಾಡುವುದನ್ನು ಕಡಿಮೆ ಮಾಡಬೇಕು.
ಅಕ್ರಮ ವಲಸಿಗರಿಂದ ಆಗುವ ಅತ್ಯಾಚಾರ, ಮಾದಕವಸ್ತುಗಳ ದೊರೆಗಳು, ಕೊಲೆಗುಡುಕರ ಬಗ್ಗೆ ಹೆಚ್ಚು ಚಿಂತೆ ಮಾಡಬೇಕಿದೆ. ಈ ವಿಚಾರದ ಬಗ್ಗೆ ಚಿಂತೆ ಮಾಡಿದರೆ ಯುರೋಪಿನಂತೆ ನಮ್ಮ ದೇಶ ಹಾಳಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Crow In Dream: ಕನಸಿನಲ್ಲಿ ಕಾಗೆ ಬಂದ್ರೆ ಶುಭವೋ ಅಶುಭವೋ..? ಇಲ್ಲಿದೆ ನೋಡಿ ಮಾಹಿತಿ
ನನ್ನ ಅಧಿಕಾರ ಅವಧಿ ಸ್ವೀಕರಿಸಿದ ಮೊದಲ ತಿಂಗಳಾದ ಫೆಬ್ರವರಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ದೇಶದ ಒಳಗೆ ಅಕ್ರಮ ವಲಸಿಗರು ನುಗ್ಗಲು ಪ್ರಯತ್ನಿಸಿದ್ದಾರೆ. ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ಗಡಿ ಗಸ್ತು ಪಡೆ ಕೇವಲ 8,326 ಅಕ್ರಮ ವಲಸಿಗರ ಬಗ್ಗೆ ಶಂಕೆ ವ್ಯಕ್ತವಾಗಿದ್ದು,
ಅವರೆಲ್ಲರನ್ನೂ ನಮ್ಮ ರಾಷ್ಟ್ರದಿಂದ ಹೊರಹಾಕಿದ್ದೇವೆ ಎಂದಿದ್ದಾರೆ. ಅಧಿಕಾರ ಸ್ವೀಕರಿಸಿದ ಮೊದಲ ತಿಂಗಳಿನಲ್ಲೇ ಅಕ್ರಮ ವಲಸಿಗರ ಸಂಖ್ಯೆಯನ್ನು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಟ್ರಂಪ್ ಹೇಳಿದರು.