ಬೆಂಗಳೂರು:- ನಗರದ ಏರ್ಪೋರ್ಟ್ ನಲ್ಲಿ IPS ಅಧಿಕಾರಿ ಸಂಬಂಧಿ ಅರೆಸ್ಟ್ ಮಾಡಲಾಗಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಡಿಆರ್ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ತಡರಾತ್ರಿ 11 ಗಂಟೆ ಸುಮಾರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೇರೆ ದೇಶದಿಂದ ದೆಹಲಿ ಮೂಲಕ ಚಿನ್ನ ಸಾಗಾಣಿಕೆ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಐಪಿಎಸ್ ಅಧಿಕಾರಿಯ ಹತ್ತಿರದ ಸಂಬಂಧಿಯನ್ನ ವಶಕ್ಕೆ ಪಡೆಯಲಾಗಿದೆ. ಇನ್ನೂ ಆ ಐಪಿಎಸ್ ಅಧಿಕಾರಿ ಸಂಬಂಧಿಯ ಎಸ್ಕಾರ್ಟ್ಗೆ ಬಂದಿದ್ದ ಪೊಲೀಸರನ್ನೂ ಡಿಆರ್ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನೀವು ನೀವು ಸ್ಮಗ್ಲಿಂಗ್ಗೆ ಸಹಾಯ ಮಾಡುತ್ತಿದ್ದೀರಿ ಅಂತ ಹೇಳಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ.