ಚೆನ್ನೈ:- ತಡ ಮಾಡ್ಬೇಡಿ, ಬೇಗ-ಬೇಗ ಮಕ್ಕಳು ಮಾಡ್ಕೊಳ್ಳಿ ಎಂದು ರಾಜ್ಯದ ಜನರಿಗೆ CM ಸ್ಟಾಲಿನ್ ಮನವಿ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ರಾಜ್ಯದ ಜನರು ಸಾಧ್ಯವಾದಷ್ಟು ಬೇಗ ಮಕ್ಕಳು ಮಾಡಿಕೊಳ್ಳಿ. ಜನಸಂಖ್ಯೆಯ ಆಧಾರದ ಮೇಲೆ ಸಂಸದೀಯ ಸ್ಥಾನಗಳನ್ನು ಪುನರ್ ವಿಂಗಡಿಸಿದರೆ ಅದು ತಮಿಳುನಾಡಿಗೆ ಹಾನಿ ಮಾಡಬಹುದು. ರಾಜ್ಯದಲ್ಲಿ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸುವುದರ ಪರಿಣಾಮಗಳನ್ನು ರಾಜ್ಯವು ಅನುಭವಿಸಬೇಕಾಗಬಹುದು. ಹೀಗಾಗಿ ರಾಜ್ಯದ ಜನರು ಸಾಧ್ಯವಾದಷ್ಟು ಬೇಗ ಮಕ್ಕಳು ಮಾಡಿಕೊಳ್ಳಿ ಎಂದರು.
ಈ ಹಿಂದೆ ನಾವು ಕಡಿಮೆ ಮಕ್ಕಳನ್ನು ಹೆರಬೇಕೆಂದು ಹೇಳುತ್ತಿದ್ದೆವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಈಗ ತಕ್ಷಣ ಮಕ್ಕಳನ್ನು ಹೆರಬೇಕೆಂದು ಹೇಳುವಂತಾಗಿದೆ. ಕೇಂದ್ರ ಸರ್ಕಾರ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡಿದರೆ, ತಮಿಳುನಾಡಿನಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆ ಮತ್ತು ಸಂಸತ್ತಿನಲ್ಲಿ ರಾಜ್ಯದ ಪ್ರಾತಿನಿಧ್ಯ ಕಡಿಮೆಯಾಗಬಹುದು ಎಂದರು.