ತಮ್ಮ ಮಾತಿನ ಮೂಲಕವೇ ಎಲ್ಲರ ಗಮನ ಸೆಳೆದಿದ್ದ ಚೈತ್ರಾ ಕುಂದಾಪುರ ಅವರು ಸಧ್ಯ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಬ್ಯೂಸಿ ಆಗಿದ್ದಾರೆ.
ಬಿಗ್ಬಾಸ್ ಮನೆಯಿಂದ ಹೊರ ಬಂದ ಬಳಿಕ ಚೈತ್ರಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಅವರ ಹೊಸ ರೂಪ, ಹೊಸ ಲುಕ್, ಹೊಸ ಹೊಸ ಮಾತುಗಳನ್ನು ನೋಡಿ ಜನರು ಫಿದಾ ಆಗುತ್ತಿದ್ದಾರೆ.
ಬಿಗ್ಬಾಸ್ ಮನೆಯಲ್ಲಿದ್ದಾಗ ಚೈತ್ರಾ ಅವರು ಸಿಂಪಲ್ ಆಗಿ ಇರುತ್ತಿದ್ದರು. ಈಗ ದಿನೇ ದಿನೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಹೊಸ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಈ ಬಾರಿ ನೇರಳೆ ಬಣ್ಣದ ಸೀರೆಯನ್ನು ತೊಟ್ಟು, ಕಣ್ಣಿಗೆ ಕೂಲಿಂಗ್ ಕ್ಲಾಸ್ ಹಾಕಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚೈತ್ರಾ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಬೆಂಕಿ ಬಿಡಿ ನೀವು ಮೇಡಂ, ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ ಅಕ್ಕ, ಸೂಪರ್, ಬೆಂಕಿ ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ.