ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭ ಉತ್ಸವವು ಬಹಳ ವಿಶೇಷವಾಗಿತ್ತು. ಪ್ರಯಾಗ್ರಾಜ್ನ ಸಂಗಮದಲ್ಲಿ ದೇಶಾದ್ಯಂತ ಕೋಟ್ಯಂತರ ಜನರು ಪವಿತ್ರ ಸ್ನಾನ ಮಾಡಿದ್ರು. ಜೊತೆಗೆ ಅನೇಕ ಸೆಲೆಬ್ರಿಟಿಗಳು ಕೂಡ ಪವಿತ್ರ ಸ್ನಾನ ಮಾಡಿದ್ರು. ಕೆಲವು ದಿನಗಳ ಹಿಂದೆ, ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಅತ್ತೆ ಜೊತೆ ಆಗಮಿಸಿ ಕುಂಭಸ್ನಾನ ಮಾಡಿದ್ರು. ಕತ್ರಿನಾ ಪವಿತ್ರಾ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಶೂಟ್ ಮಾಡಿ ರೀಲ್ಸ್ ರೀತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಸಿಎಂ ಬದಲಾವಣೆ ಬಗ್ಗೆ ಕೋಡಿಮಠದ ಶ್ರೀಗಳು ನುಡಿದ ಭವಿಷ್ಯ ಏನ್ ಗೊತ್ತಾ..?
ಅನುಮತಿಯಿಲ್ಲದೇ ಕುಂಭಮೇಳದಲ್ಲಿ ಕತ್ರಿನಾ ಕೈಫ್ ವಿಡಿಯೋ ಶೂಟ್ ಮಾಡಿದವರಿಗೆ ರವೀನಾ ಟಂಡನ್ ಕಿಡಿಕಾರಿದ್ದಾರೆ.
ಅತ್ತೆಯೊಂದಿಗೆ ತ್ರಿವೇಣಿ ಸಂಗಮದಲ್ಲಿ ನಟಿ ಪವಿತ್ರಾಸ್ನಾನ ಮಾಡಿದ್ದ ವಿಡಿಯೋ ವೈರಲ್ ಆಗಿದೆ. ನಟಿ ಪವಿತ್ರಾಸ್ನಾನ ಮಾಡುತ್ತಿರುವ ವಿಡಿಯೋವನ್ನು ಕೆಲ ಪುರುಷರು ಶೂಟ್ ಮಾಡಿ ರೀಲ್ಸ್ ಮಾಡಿದ್ದಾರೆ. ಈ ಹಿನ್ನೆಲೆ ಕತ್ರಿನಾ ಅನುಮತಿಯಿಲ್ಲದೇ ವಿಡಿಯೋಶೂಟ್ ಮಾಡಿದ ಕಿಡಿಗೇಡಿಗಳಿಗೆ ‘ಕೆಜಿಎಫ್ 2’ ಖ್ಯಾತಿಯ ರವೀನಾ ಟಂಡನ್ ಕಿಡಿಕಾರಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ನಟಿ ಪವಿತ್ರಾಸ್ನಾನ ಮಾಡುತ್ತಿರುವ ಇಬ್ಬರೂ ಪುರುಷರು ನಗುತ್ತಾ ‘ಇದು ನಾನು, ಇದು ನನ್ನ ಸಹೋದರ, ಮತ್ತು ಹಿಂದೆ ಕತ್ರಿನಾ ಕೈಫ್ ಇದ್ದಾರೆ ಎಂದು ಹೇಳಿದ್ದಾರೆ. ನಟಿಯ ಅನುಮತಿಯಿಲ್ಲದೇ ವಿಡಿಯೋ ತೆಗೆದಿದಲ್ಲದೇ ನಟಿಯ ನೋಡಿ ನಗುತ್ತಿರುವ ಪುರುಷರ ನಡೆಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.