ದುಬೈನಲ್ಲಿ ನಾಳೆ 2025ರ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿ ಫೈನಲ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಣಸಾಟ ನಡೆಸಲಿವೆ.
ಫುಡ್ ಡೆಲಿವರಿ ಮಾಡೋರಿಗೆ ಬಿಗ್ ಶಾಕ್: ಯೆಲ್ಲೋ ಬೋರ್ಡ್ ಕಡ್ಡಾಯ ಎಂದ ಪೊಲೀಸ್!
2023ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಭಾರತ ತಂಡ ಇದೆ. ಇದರ ಮಧ್ಯೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಆಸ್ಟ್ರೇಲಿಯಾಗೆ ಎಚ್ಚರಿಕೆ ನೀಡಿದ್ದಾರೆ. ನಿನ್ನೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮುಗಿದ ಬಳಿಕ ಮಾತನಾಡಿದ ಅವರು, ಕಠಿಣ ಹೋರಾಟ ಯಾವಾಗಲೂ ಒಳ್ಳೆಯದು. ಸಣ್ಣ ಟೂರ್ನಿಗಳಲ್ಲಿ ಪ್ರತಿಯೊಂದು ಪಂದ್ಯವೂ ಮುಖ್ಯ. ಐಸಿಸಿ ಪಂದ್ಯಾವಳಿಗಳಲ್ಲಿ ಆಸ್ಟ್ರೇಲಿಯಾ ಚೆನ್ನಾಗಿ ಆಡಲಿದೆ. ಅವರು ಉತ್ತಮವಾಗಿ ಆಡುವ ಇತಿಹಾಸ ಹೊಂದಿದೆ. ಆದರೆ ನಮ್ಮ ದಿನದಂದು ಯಾರೂ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ, ಉತ್ತಮ ಹೋರಾಟವಾಗಲಿದೆ ಎಂದರು. ಆ ದಿನಕ್ಕಾಗಿ ನಾವು ಎದುರು ನೋಡ್ತಿದ್ದೇವೆ ಎಂದಿದ್ದಾರೆ.