ಬೆಂಗಳೂರು:- ಸೆಕ್ಯೂರಿಟಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬ್ಯಾಟರಾಯನಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆ ; ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ
ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಕಾರ್ತೀಕ್ ಬಂಧಿತ ಆರೋಪಿ. ಈತ ಟೆಂಬರ್ ಲೇಔಟ್ ನ ನಮಸ್ತೆ ಗಾರ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್ ಎಂಬ ಸೆಕ್ಯೂರಿಟಿ ಗಾರ್ಡ್ ಕೊಲೆ ಮಾಡಿದ್ದ. ಕೊಲೆ ಬಳಿಕ ಆರೋಪಿ ತಲೆಮರಿಕೊಂಡಿದ್ದ. ಡೆಲವರಿ ಕೊಡುವ ನೆಪದಲ್ಲಿ ಬಂದು ಆರೋಪಿ ಚಾಕು ಹಾಕಿ ಹೋಗಿದ್ದ. ಆರೋಪಿ ವಿಚಾರಣೆ ವೇಳೆ ಕೊಲೆಗೆ ಕಾರಣ ಬೆಳಕಿ ಬಂದಿದೆ. ಎರಡು ದಿನಗಳ ಹಿಂದೆ ಡೆಲವರಿ ಕೊಡೊದಕ್ಕೆ ನಮಸ್ತೆ ಗಾರ್ಮೆಂಟ್ ಬಳಿ ಆರೋಪಿ ಕಾರ್ತಿಕ್ ಹೋಗಿದ್ದ. ಬೈಕ್ ಪಾರ್ಕ್ ಮಾಡುವ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಆಗಿದೆ. ಗಲಾಟೆ ಮನಸ್ಸಿನಲ್ಲಿಟ್ಟುಕೊಂಡಿದ್ದ ಆರೋಪಿ ನೆಕ್ಟ್ ಡೆ ಹೋಗಿ ಸೆಕ್ಯೂರಿಟಿ ಗಣೇಶ್ ಗೆ ಚಾಕು ಹಾಕಿ ಎಸ್ಕೇಪ್ ಆಗಿದ್ದ ಇದೀಗ ಪೊಲೀಸರು, ಆತನನ್ನು ಅರೆಸ್ಟ್ ಮಾಡಿದ್ದಾರೆ.