ಬೆಂಗಳೂರು:- ಬೆಂಗಳೂರಿನಲ್ಲಿ ಅತಿವೇಗದ ಚಾಲನೆಯಿಂದ ಭಾರೀ ಅವಘಡ ಒಂದು ಸಂಭವಿಸಿದೆ. ಮಾಡಿಸಿಕೊಂಡು ಬರುತ್ತಿದ್ದ ಬೆಂಜ್ ಗೆ ಮಾರುತಿ ರಿಟ್ಝ್ ಕಾರು ಡಿಕ್ಕಿ ಹೊಡೆದಿರುವ ಘಟನೆ ಮೈಸೂರು ರಸ್ತೆ ಫ್ಲೈ ಓವರ್ ನಲ್ಲಿ ಜರುಗಿದೆ.
ಉಸಿರಾಟದ ಸೋಂಕಿನ ಹೊಸ ಅಲೆ: ಮೈಕೋಪ್ಲಾಸ್ಮಾ ನ್ಯೂಮೊನಿಯೆ ಬಗ್ಗೆ ಹೆತ್ತವರೇ ಹುಷಾರ್!
ಟೌನ್ ಹಾಲ್ ಕಡೆಯಿಂದ ನಾಗರಭಾವಿ ಕಡೆಗೆ ಸುನೀಲ್ ಕುಮಾರ್ ಎಂಬುವರಿಗೆ ಸೇರಿದ ಬೆಂಜ್ ಹೊಗುತ್ತಿತ್ತು. ಅದರಂತೆ ಮೈಸೂರು ರಸ್ತೆಯಿಂದ ಟೌನ್ ಹಾಲ್ ಕಡೆಗೆ ಆದೀಲ್ ಪಾಷಾ ಎಂಬುವರಿಗೆ ಸೇರಿದ ರಿಟ್ಜ್ ಕಾರು ಬರುತ್ತಿತ್ತು.
ಹೊಸ ಬೆಂಜ್ ಗೆ ತಿರುಪತಿಯಲ್ಲಿ ಪೂಜೆ ಮಾಡಿಸಿಕೊಂಡು ಮನೆಗೆ ಸುನೀಲ್ಕುಮಾರ್ ಹೋಗುತ್ತಿದ್ದ. ಈ ವೇಳೆ ಏಕಾಏಕಿ ಮಾರುತಿ ರಿಟ್ಜ್ ವಾಹನದ ಟೈರ್ ಬ್ಲಾಸ್ಟ್ ಆಗಿ ಬೆಂಜ್ ಗೆ ಡಿಕ್ಕಿ ಹೊಡೆದಿದೆ.
ಬೆಂಜ್ ಕಾರಿನ ಒಂದು ಕಡೆ ಉಜ್ಜಿಕೊಂಡು ರಿಟ್ಜ್ ಹೋಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಯವಿಲ್ಲ ಚಾಮರಾಜಪೇಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.